ಒಂದು ಲಕ್ಷ ಪತ್ರ ಅಭಿಯಾನ ಸಂಕಲ್ಪ :ವಿ.ಲಿ.ಮಹಾ ವೇದಿಕೆ
ಕಲಬುರಗಿ:ಆ.19:ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ್ ಹೆಸರನ್ನು ನಾಮಕರಣ ಮಾಡಲು ಅಗ್ರಹಿಸಿ ಇಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ ಜಿಲ್ಲಾ ಸಮಿತಿ ಕಲಬುರ್ಗಿ ವತಿಯಿಂದ ಮಾನ್ಯ ಪ್ರಧಾನ ಮಂತ್ರಿಗಳಿಗೆ ಪತ್ರ ಚಳುವಳಿ ಅಭಿಯಾನ ಮೂಲಕ ಕಲಬುರ್ಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದ್ಲಲಿ ಪತ್ರ ಚಳುವಳಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. .
ವಿಶೇಷವಾಗಿ ವೈದ್ಯರು ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಸಂತಸದಿಂದ ಭಾಗಿಯಾದರು.
ಈ ಸಂದರ್ಭದಲ್ಲಿ ಡಾ. ಅಲ್ಲಮ ದೇಶಮುಖ, ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ದಯಾನಂದ ಎಮ್ ಪಾಟೀಲ್ ಮತ್ತು ಯುವ ಮುಖಂಡರಾದ ಶ್ರೀಧರ ಎಮ್ ನಾಗನಹಳ್ಳಿ, ಮುಖಂಡರಾದ್ ವಿನೋದ್ ಪಾಟೀಲ್ ಸರಡಗಿ, ವೇದಿಕೆಯ ಸಂಘಟನ ಕಾರ್ಯದರ್ಶಿ ಆನಂದ್ ಕಣಸೂರ್, ಜಿಲ್ಲಾ ಸಂಚಾಲಕರಾದ್ ಗುರುರಾಜ್ ಅಂಬಾಡಿ ಮತ್ತು ಕಿರಣ್ ಕಣ್ಣಿ ಆಕಾಶ ಕುಲಕರ್ಣಿ ಮತ್ತು ಕಲ್ಯಾಣ್ರಾವ್ ಪಾಟೀಲ್ ಕಣ್ಣಿ, ಮಹೇಶ್ ಚಂದ್ರ ಕಣ್ಣಿ, ಸುನೀಲ್ ಮಹಾಗವಂಕರ್, ಪ್ರಭವ್ ಪಟ್ಟಣಕರ, ಮತ್ತು ವೇದಿಕೆಯ ಸದ್ಯಸರು ಉಪಸ್ಥಿತರಿದ್ದರು