ಸಜ್ಜನರ ಸಂಗ ಹೆಜ್ಜೆನು ಸವಿದಂತೆ
ಕಲಬುರಗಿ:ಆ.19:ಶರಣರು ತೋರಿದಂತೆ ಸಜ್ಜನರ ಸಂಘ ಮಾಡಬೇಕು ಎಂದು ದೊಡ್ಡಪ್ಪ ಅಪ್ಪ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಆನಂದ ಸಿದ್ಧಾಮಣಿ ಹೇಳಿದರು.
ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಭಾನುವಾರ ಸತ್ಸಂಗ ಎಂಬ ವಿಷಯ ಕುರಿತು ಮಾತನಾಡಿದರು.
ಶರಣರು ಹೇಳುವಂತೆ ಸಜ್ಜನರ ಸಂಗ ಹೆಜ್ಜೆನು ಸವಿದಂತೆ , ಯಾರು ಸಜ್ಜನರ ಸಂಗ ಮಾಡುತ್ತಾರೆ ಅವರು ಜೀವನದಲ್ಲಿ ಸುಖವಾಗಿ ಇರುತ್ತಾರೆ. ಬಸವಾದಿ ಶರಣರು ಜಾತಿ, ಮಥ, ಪಂತ ಎಂದು ಬೇರೆ ಮಾಡಲಿಲ್ಲ. ಅವರು ಎಲ್ಲರನ್ನೂ ಶ್ರೇಷ್ಠರೆಂದು ತಿಳಿಯುತ್ತಿದ್ದರು. ಶರಣಬಸವರು ಬೇರೆ ಬೇರೆ ಜಾತಿ ಎನ್ನದೆ ಭಕ್ತಕುಲ ಮತ್ತು ಭವಿಕುಲ ಎರಡೆ ಎಂದು ಹೇಳಿದವರು. ಯಾರು ಸತ್ಸಂಗದಲ್ಲಿ ಇರುತ್ತಾರೆ ಅವರು ಭಕ್ತಕುಲವಾದರೆ, ಯಾರು ಭಕ್ತನೇತರರಾಗಿರುತ್ತಾರೆ ಅವರು ಭವಿಕುಲದಲ್ಲಿರುತ್ತಾರೆ. ಶರಣರ ಆಧ್ಯಾತ್ಮೀಕ ಜೀವನವೇ ಉತ್ತಮ ಸತ್ಸಂಗವಾಗಿತ್ತು. ಎಲ್ಲರೂ ಭಕ್ತಿ ಪಥದಲ್ಲಿ ನಡೆಯಬೇಕು. ಮಕ್ಕಳಿಗೆ ಅಧ್ಯಾತ್ಮೀಕ ದಾರಿಯಲ್ಲಿ ನಡೆಸಬೇಕು ಅಂದಾಗ ಉತ್ತಮ ಸತ್ಸಂಗ ದೊರಕುತ್ತದೆ. ಶರಣಬಸವರು ದುರ್ಗುಣ, ದುರ್ಚಟಗಳನ್ನು ಮಾಡಬಾರದು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಸಜ್ಜನರ ಸನ್ಮಾರ್ಗದಲ್ಲಿ ನಡೆಯಬೇಕು. ಭೌತಿಕ ಸುಖದ ಹಿಂದೆ ಬಿದ್ದರೆ ಪಾರಮಾರ್ಥ ಸುಖ ಪಡೆಯಲು ಆಗುವುದಿಲ್ಲ. ಸತ್ಗಂಗವು ಎರಡು ಪದಗಳ ಸತ್ ಮತ್ತು ಸಂಗ, ಸತ್ ಎಂದರೆ ಸಂಪೂರ್ಣ ಅಸ್ತಿತ್ವ ಬ್ರಹ್ಮದ ಅಗತ್ಯ ಸ್ವರೂಪವಾಗಿದೆ. ಇದು ನಿರಂತರ ಬದಲಾಗುತ್ತಿರುವವರಲ್ಲಿ ಶಾಶ್ವತವಾಗಿದೆ. ಸಂಗ ಎಂದರೆ ಒಕ್ಕೂಟ. ಸತ್ಯವನ್ನು ಅರಿತುಕೊಂಡವರ ಸಹವಾಸ. ಸತ್ಯದ ಅಕಾಂಕ್ಷಿಗಳು ಸತ್ಸಂಗವು ಅಧ್ಯಾತ್ಮೀಕ ಪ್ರಕಾಶವನ್ನು ನೀಡುತ್ತದೆ ಮತ್ತು ಈಶ್ವರನ ಸಾಕ್ಷತ್ಕಾರವನ್ನು ಸಾಧಿಸಲು ಮೂಲಭೂತ ಸಾಧನವಾಗಿದೆ ಎಂದು ಹೇಳಿದರು.