ಮೂರ್ತಿ ಪ್ರತಿಷ್ಠಾಪನೆ
ಬಾದಾಮಿ, ಆ19: ಇಲ್ಲಿಯ ಕಂಠಿವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ಶಿರಡಿ ಸಾಯಿಬಾಬಾರವರ ದೇವಸ್ಥಾನದಲ್ಲಿ ಸಾಯಿಬಾಬಾರ ಹೊಸ ದೊಡ್ಡ ಮೂರ್ತಿಯನ್ನು ಹೋಮ ಹವನ ಮತ್ತು ವಿಶೇಷ ಪೂಜಾ ಕೈಂಕರ್ಯ ಮೂಲಕ ಪ್ರತಿಷ್ಟಾಪಿಸಲಾಯಿತು.
ಈ ಸಂದರ್ಭದಲ್ಲಿ ಸುನೀಲ ಕಾರುಡಗಿಮಠ, ಸಂಜೀವ ಬರಗುಂಡಿ, ಈರಣ್ಣ ಪಟ್ಟಣದ, ಎನ್.ಎಸ್.ದೀಕ್ಷಿತ, ಎಂ.ಆರ್.ಮಲ್ಲಾಪೂರ, ಕಮಲಮ್ಮ ಜಿಗಬಡ್ಡಿ, ಸ್ವಪ್ನಾ ಪಟ್ಟಣದ, ಕವಿತಾ ಬಂಗಾರಶೆಟ್ಟರ, ಗೌರಮ್ಮ ಚಿನಿವಾಲರ, ಶ್ರೀಮತಿ ಮಲ್ಲಾಪೂರ, ಶೇಖಣ್ಣ ಭಿಕ್ಷಾವತಿಮಠ, ಭೀಮಸಿ ಬೀರಕಬ್ಬಿ, ರಾಕೇಶ ಕಲಾಲ, ಈರಣ್ಣ ಆಲೂರ ದೇವಸ್ಥಾನ ಅಭಿವೃದ್ಧಿ ಸಮಿತಿ ಸರ್ವ ಹಾಗೂ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.