ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ
ಲಕ್ಷ್ಮೇಶ್ವರ,ಆ.19:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ ಗೆಲ್ಲೋಟವರ ನಡೆಯನ್ನು ಖಂಡಿಸಿ ಕಾಂಗ್ರೆಸ್ಸಿನ ನೂರಾರು ಕಾರ್ಯಕರ್ತರು ಶಿಗ್ಲಿ ನಾಕಾದಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಗೋ ಬ್ಯಾಕ್ ಗವರ್ನರ್ ಗೋ ಬ್ಯಾಕ್ ಗವರ್ನರ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೇಂದ್ರದ ವಿರುದ್ಧವು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಈಶ್ವರ್ ಮಾಜಿ ಶಾಸಕರಾದ ಜಿಎಸ್ ಗಡ್ಡದೇವರ ಮಠ ರಾಮಕೃಷ್ಣ ದೊಡ್ಡಮನಿ ರಾಮಣ್ಣ ಲಮಾಣಿ ಚೆನ್ನಪ್ಪ ಜಗಲಿ ಫಕೀರೇಶ ಮ್ಯಾಟಣ್ಣನವರ ರಾಮಣ್ಣ ಲಮಾಣಿ ಶಿಗ್ಲಿ ಅಂಬರೀಶ್ ತೆಂಬದಮನಿ ತಿಪ್ಪಣ್ಣ ಸಂಶಿ ಗುರುನಾಥ ದಾನಪ್ಪನವರ, ಸೋಮಣ್ಣ ಬೆಟಗೇರಿ, ಮತ್ತಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ವಿಜಿ ಪಡಿಗೇರಿ ಅಮರಪ್ಪ ಗುಡುಗುಂಟಿ ಸುರೇಶ್ ಬೀರಣ್ಣವರ ರಾಮು ಗಡದವರ ರಾಮು ಅಡ್ಗಿಮನಿ ಗೀತಾ ಬೀರಣ್ಣನವರ ಭಾಗ್ಯಶ್ರೀ ಬಾಬಣ್ಣ ಶರಣು ಗೋಡಿ ಬಸವರೆಡ್ಡಿ ಹನುಮರೆಡ್ಡಿ ವಿನೋದ ಶಿರಹಟ್ಟಿ ಶೇಖಣ್ಣ ಕಾಳೆ ಎಲ್ಲಪ್ಪ ಸುರಣಿಗಿ ನೀಲಪ್ಪ ಪಡಿಗೇರಿ ಮಹಮ್ಮದ್ ಅಲಿ ಗಾಡ್ ಗೂಳಿ ಎಲ್ಲಪ್ಪ ಹಂಜಿ ರಾಜಣ್ಣ ಹೊಳಲಾಪುರ ಸತೀಶ್ ಗೌಡ ಪಾಟೀಲ್ ರಾಜು ಹುಲಗೂರ ಮಹಮ್ಮದ್ ರಫಿ ಕಲಬುರ್ಗಿ ಮಂಜಣ್ಣ ಶರಶೂರಿ ಪದ್ಮರಾಜ್ ಪಾಟೀಲ್ ಮಲ್ಲಪ್ಪ ಗದ್ದಿ ಛಾಯಪ್ಪ ಬಸಾಪುರ ಗೋನಾಳ ಗೋನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ರಾಮಗೇರಿ ಸೇರಿದಂತೆ ಅನೇಕರಿದ್ದರು.