ಮಾಜಿ ಸಚಿವ ಪಾಟೀಲ್ ಸವಾಲು ಶಾಸಕ ಪಾಟೀಲ್ ಸ್ವೀಕಾರ
ಹುಮನಾಬಾದ್:ಆ.19:ಭ್ರಷ್ಟಾಚಾರ ಆರೋಪದ ಕರಿತು ಮಾಜಿ ಸಚಿವ ರಾಜಶೇಖರ ಪಾಟೀಲ್ ನೀಡಿರುವ ಆಣೆ ಪ್ರಮಾಣದ ಸವಾಲು ನಾನು ಸ್ವೀಕರಿಸುತ್ತೇನೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ಹುಮನಾಬಾದ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕ ಹಾಗೂ ಒಂದು ಸಚಿವರಾಗಿ ಅಧಿಕಾರ ನಿರ್ವಹಣೆ ಮಾಡಿದ್ದಾರೆ. ಈ ಅವಧಿಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ಯಾರಿಂದಲೂ ಹಣ ವಸೂಲಿ ದಂಧೆ ಮಾಡಿಲ್ಲ ಎಂದು ವೀರಭದ್ರೇಶ್ವರರ ಆಣೆ ಮಾಡಲಿ ನಂತರ ನನ್ನ ಪರಿವಾರದ ಸದಸ್ಯರ ಸಮ್ಮುಖದಲ್ಲಿ ಆಣೆ ಪ್ರಮಾಣ ಮಾಡುತ್ತೇನೆ ಎಂದು ಸವಾಲು ಸ್ವೀಕರಿಸಿದರು.
ಹುಮನಾಬಾದ್ ಕ್ಷೇತ್ರದಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಪ್ರಭುತ್ವ ಅಸ್ತಿತ್ವದಲ್ಲಿತ್ತು. ಆದರೆ ಕಳೆದ ಒಂದುವರೆ ವರ್ಷದಲ್ಲಿ ರಾಜಪ್ರಭುತ್ವ ಬುಡಸಮೇತ ಕಿತ್ತೇಸೆದು ಮತ್ತೆ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದ್ದೇನೆ. ಕ್ಷೇತ್ರದ ಮಹಾಜನತೆ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಯಾವುದೇ ಒಂದು ಆರೋಪ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವರು ತಮ್ಮ ಕಾರ್ಯಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೊಬ್ಬರ ಬಗ್ಗೆ ಆರೋಪಗಳು ಮಾಡಲಿ ಎಂದು ಎಚ್ಚರಿಕೆ ನೀಡಿದರು.
ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಕಾರಖಾನೆಗಳಿಂದ ಹಣ ವಸೂಲಿ ದಂಧೆ ನಾಗಭೂಷಣ ಪಾಟೀಲ್ ಪರಿವಾರದವರು ಮಾಡಿಲ್ಲ. ಆದರೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಪರಿವಾರದ ಸದಸ್ಯರು ಕಾರಖಾನೆಗಳ ಮಾಲೀಕರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಅವರಿಂದ ಹಣ ವಸೂಲಿ ಮಾಡುವ ಮೂಲಕ ತಮ್ಮ ಮಗಳ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಹುಮನಾಬಾದ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಅಧಿಕಾರ ನಿರ್ವಹಣೆ ಮಾಡಿದ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ತಿರಂಗಾ ಯಾತ್ರೆಗೆ ಅಗೌರವ ತೋರುವಂತ ಹೇಳಿಕೆ ನೀಡಿರಿವುದು ಮಾಜಿ ಸಚಿವರಿಗೆ ಶೋಭೆ ತರುವುದಿಲ್ಲ. ಹೀಗಾಗಿ ಮಾಜಿ ಸಚಿವರೇ ಗಾಂಜಿನ ಮನೆಯ ಮೇಲೆ ಕುಳಿತು ಮತ್ತೊಬ್ಬರ ಮನೆಗೆ ಕಲ್ಲು ಎಸೆಯಬೇಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ್ ಮಾಡಗೂಳ, ಬಸವರಾಜ ಆರ್ಯ, ಮಲ್ಲಿಕಾರ್ಜುನ್ ಪಾಟಿಜಲ್, ಬಿಜೆಪಿ ಮಂದಲ್ ಅಧ್ಯಕ್ಷ ಅನಿಲ್ ಪಸಾರ್ಗಿ, ನಾಗಭೂಷಣ ಸಂಗಮ್, ಗೋಪಾಲಕೃಷ್ಣ ಮೋಹಾಳೆ ಇದ್ದರು.
ಪಡಿತರ ಅಕ್ಕಿ ಹುಮನಾಬಾದ್ ಪಟ್ಟಣದಲ್ಲಿ ಸಂಗ್ರಹಿಸಿಟ್ಟು ಮಹಾರಾಷ್ಟ್ರಕ್ಕೆ ಸಾಗಾಟ ಮಾಡುವ ವ್ಯಕ್ತಿಗಳಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಸಂಪೂರ್ಣ ಸಹಕಾರವಿದೆ.
ಸೋಮನಾಥ ಪಾಟೀಲ್
ಬಿಜೆಪಿ ಜಿಲ್ಲಾಧ್ಯಕ್ಷ ಬೀದರ್
ನಾಗಭೂಷಣ ಪಾಟೀಲ್, ಬಸವರಾಜ ಪಾಟೀಲ್ ಹಾಗೂ ವೀರಣ್ಣ ಪಾಟೀಲ್ ಪರಿವಾರಕ್ಕೆ ಸಂಬಂಧಿಸಿದ ಎಲ್ಲ ಆಸ್ತಿಗಳ ವಿವರವನ್ನು ಪರಿಶೀಲನೆ ಮಾಡಲು ಜಿಲ್ಲಾಧಿಕಾರಿಗೆ ವಹಿಸೋಣ.
ಡಾ. ಸಿದ್ದು ಪಾಟೀಲ್
ಶಾಸಕ, ಹುಮನಾಬಾದ್