ಕಂಪ್ಲಿ-ಗಂಗಾವತಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,19- ಜಿಲ್ಲೆಯ ಕಂಪ್ಲಿ ಮತ್ತು ಗಂಗಾವತಿ ಮಧ್ಯೆ ಸಂಪರ್ಕ ಕಲ್ಪಿಸುವ ತುಂಗಭದ್ರ ನದಿಯ ಸೇತುವೆ ಮೇಲೆ  ಭಾರಿ ವಾಹನಗಳನ್ನು ಬಿಟ್ಟು ಉಳಿದ ವಾಹನಗಳ ಓಡಾಟ ಕ್ಕೆ ಇಂದು ಅನುಮತಿ‌ ನೀಡಲಾಗಿದೆ
ಕಳೆದ ಹತ್ತಾರು ದಿನಗಳಿಂದ ನದಿ‌ತುಂಬಿ ಹರಿಯುತ್ತಿದ್ದರಿಂದ ಈ ಸೇತುವೆ ಮೇಲೆ ವಾಹನ ಮತ್ತು ಮನುಷ್ಯರ ಓಡಾಟವನ್ನು ನಿಷೇಧಿಸಿತ್ತು.
ಕೆಲ ದಿನಗಳಿಂದ ಜನರ ಓಡಾಟಕ್ಕೆ ಮಾತ್ರ ಅವಕಾಶ ನೀಡಿತ್ರು. ಆದರೆ ಈಗ ಲೋಕೋಪಯೋಗಿ ಇಲಾಖೆಯವರು  ಸೇಯುವೆ ಹಳೆಯದಾಗಿರುವುದರಿಂದ ಪರಿಶೀಲನೆ ನಡೆಸಿ. ಲಗಹುವಾಹನಗಳ ಸಂದರೆ ಬೈಕ್, ಆಟೋ, ಕಾರು ಮತ್ತು ಶಾಲಾ ವಸಹನಗಳ ಓಡಾಟಕ್ಕೆ ಅವಕಾಶ ನೀಡಿದ್ದು ಇಂದು ಈ ಲಘು ವಾಹನಗಳ ಒಡಾಟ ಆರಂಭಗೊಂಡಿದೆ.