ಟಿಬಿ ಡ್ಯಾಂ: ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಸೋಮಶೇಖರ ರೆಡ್ಡಿ ಶ್ಲಾಘನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.19:  ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ   ತುಂಗಭದ್ರಾ ಜಲಾಶಯದಲ್ಲಿ  ಹಾನಿಗೀಡಾಗಿದ್ದ 19ನೇ ಕ್ರಸ್ಟ್ ಗೇಟಿಗೆ ಸ್ಟಾಪ್ ವಾಲ್ ಗೇಟ್ ಅಳವಡಿಸಿ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ನಿಲ್ಲಿಸಿರುವ ತಜ್ಞ ಕನ್ನಯ್ಯ ನಾಯ್ಡು ಮತ್ತು ತಂಡಕ್ಕೆ  ನಗರದ ಮಾಜ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದ ಎಂಜಿನಿಯರ್ ಕನ್ಹಯ್ಯ ನಾಯ್ಡು ಅವರನ್ನು  ವಿಶೇಷವಾಗಿ ಅಭಿನಂದಿಸುವೆ.  ಜಲಾಶಯದಿಂದ ನೀರು ಹರಿಯುವಾಗಲೇ ಕ್ರಸ್ಟ್ ಗೇಟಿಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಿರುವುದು ಇಡೀ ದೇಶದಲ್ಲೇ ಮೊದಲಾಗಿದ್ದು ಎಲ್ಲರೂ ಹರ್ಷಪಡುವ ಸಂಗತಿಯಾಗಿದೆಂದಿದ್ದಾರೆ.
ಕಾರ್ಯಾಚರಣೆ ತಂಡ ಹಗಲಿರುಳು ಶ್ರಮದ ಫಲವಾಗಿ ಜಲಾಶಯದಲ್ಲಿ 72 ಟಿಎಂಸಿ ನೀರು ಉಳಿದಿದೆ. ಹೀಗಾಗಿ ರೈತರು, ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.