ಆರ್ಯ ವೈಶ್ಯ ಅಸೋಸಿಯೇಷನ್  ನಿಂದ  ಉಚಿತ ಆರೋಗ್ಯ ತಪಾಸಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.17: ನಗರದಲ್ಲಿನ ಬಳ್ಳಾರಿಯ ಆರ್ಯ ವೈಶ್ಯ ಅಸೋಸಿಯೇಷನ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಜಂಟಿಯಾಗಿ ನಿನ್ನೆ  ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ  ಇಲ್ಲಿನವಾಸವಿ ಕಲ್ಯಾಣ ಮಂಟಪದಲ್ಲಿನ  ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು.
ಹೃದ್ರೋಗ ತಜ್ಞ ಡಾ. ಮಲ್ಲಿಕಾರ್ಜುನ, ಮೂತ್ರಶಾಸ್ತ್ರ ತಜ್ಞ ಡಾ. ಪಾರ್ಥಸಾರಥಿ, ಕ್ಯಾನ್ಸರ್ ತಜ್ಞ ಡಾ. ಸರ್ವಣರೆಡ್ಡಿ, ಆರ್ಥೋ ವೈದ್ಯಕೀಯ ಮತ್ತು ನರವಿಜ್ಞಾನ ತಜ್ಞ ಡಾ. ಫೈಜ್ ಮತ್ತು ಜನರಲ್ ಸರ್ಜನ್ ಡಾ. ಹರಿಚರಣ್ ಅವರು ಆರೋಗ್ಯ ತಪಾಸಣೆ ಮಾಡಿದರು.
ಸಾರ್ವಜನಿಕರು ಆಗಮಿಸಿ ಉಚಿತ ಪರೀಕ್ಷೆ ಮಾಡಿಸಿಕೊಂಡರು.  ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಲ ಬಿಪಿಎಲ್ ಕಾರ್ಡ್‍ದಾರರಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಈ ವೇಳೆ ಅಸೋಸಿಯೇಷನ್ ಅಧ್ಯಕ್ಚ ಡಾ.ರಮೇಶ್ ಗೋಪಾಲ್, ಕಾರ್ಯದರ್ಶಿ ಸೊಂತಗಿರಿಧರ್ ವಿಟ್ಟಾ  ವೆಂಕಟೇಶ್, ನಾಮ ನಾಗರಾಜ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು