ಪಿಕಪ್-ಬೈಕ್ ಡಿಕ್ಕಿ: ಬೈಕ್‌ಸವಾರ ಮೃತ
ಪುತ್ತೂರು; ಮಾಣಿಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಬೈಕ್ ಮತು ಪಿಕಪ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.  ಮಾಡ್ನೂರು ಗ್ರಾಮದ ಕಾವು ಬಜಕುಡೇಲು ದಿ. ರಾಮ ಬಂಡಾರಿ ಅವರು ಪುತ್ರ ಸುರೇಶ್ ಬಂಡಾರಿ (೪೫) ಮೃತಪಟ್ಟ ದುರ್ದೈವಿ.
ಅಮ್ಚಿನಡ್ಕ ಎಂಬಲ್ಲಿ ಸೆಲೂನ್ ಹೊಂದಿದ್ದ ಸುರೇಶ್ ತನ್ನ ಕ್ಷೌರಿಕ ವೃತ್ತಿಗಾಗಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಕಾವಿಗೆ ಖಾಸಗಿ ಕಾರ್ಯಕ್ರಮದ ಹಿನ್ನಲೆಯಿಂದ ಬರುತ್ತಿದ್ದ ಪಿಕಪ್ ಹಾಗೂ ವಿರುದ್ಧ ದಿಕ್ಕಿನಿಂದ ಹೋಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಮೃತರು ಅವಿವಾಹಿತರಾಗಿದ್ದರು. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.