ಜ್ಯೋತಿಷ್ಯ ದೀಪ ಬದುಕಿಗೆ ಮಾರ್ಗದರ್ಶಿ: ರಾಘವೇಶ್ವರ ಶ್ರೀ

ಗೋಕರ್ಣ: ಪ್ರಕೃತಿ ಕೊಡುವ ಸೂಚನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಅದನ್ನು ತಿಳಿದುಕೊಂಡು ನಮ್ಮ ಪೂರ್ವಜರು ಕೃತಿರೂಪದಲ್ಲಿ ತಂದು ಆ ಅಪೂರ್ವ ಜ್ಞಾನ ಪರಂಪರೆ ಮುಂದುವರಿಸಿದ್ದಾರೆ. ಇದನ್ನು ತಿಳಿದುಕೊಂಡರೆ ನಮ್ಮ ಜೀವನ ಸುಲಭ. ಜ್ಯೋತಿಷ ಶಾಸ್ತ್ರವೆಂಬ ದೀಪದ ಮೂಲಕ ನಾವು ಬದುಕು ಅರ್ಥ ಮಾಡಿಕೊಳ್ಳಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುಮಾಸ್ಯ ಕೈಗೊಂಡಿರುವ ಪರಮಪೂಜ್ಯರು ೨೯ನೇ ದಿನ ’ಕಾಲ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದರು. ಪ್ರಶ್ನ ಜ್ಯೋತಿಷ, ತಾಂಬೂಲ ಜ್ಯೋತಿಷ, ಜಾತಕ, ಶಕುನಶಾಸ್ತ್ರ ಹೀಗೆ ವಿವಿಧ ಪ್ರಕಾರಗಳಿಂದ ಕಾಲನ ಭಾಷೆಯನ್ನು ತಿಳಿಯಬಹುದು. ನಮ್ಮ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಕೃತಿ ನಮಗೆ ಹಲವು ಮಾರ್ಗಗಳನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಕಾಲ ನಮ್ಮೊಂದಿಗೆ ಮಾತನಾಡುತ್ತದೆ. ಜೌತಿಷದ ಮೂಲಕ ಕಾಲದ ಭಾಷೆಯನ್ನು ಅರ್ಥ ಮಾಡಿಕೊಳ್ಳಬಹುದು. ಖಗೋಳದ ಮೂಲಕ ನನ್ನ ಬದುಕನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಖಗೋಳದಲ್ಲಿ ನಮ್ಮ ಸ್ಥಾನವನ್ನು ನಾವು ತಿಳಿದರೆ ಕಾಲನ ಬಾಷೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಹೇಳಿದರು.
ಕಾಲ ನಮ್ಮ ಜೀವನದ ಪ್ರತಿ ಕ್ಷಣ ನಮ್ಮೊಂದಿಗೆ ಮಾತನಾಡುತ್ತಿರುತ್ತದೆ. ಅದನ್ನು ತಿಳಿದುಕೊಳ್ಳುವ ಕೌಶಲ ನಮಗಿದ್ದರೆ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಈಗ ಮಾಡುವ ಕರ್ಮಗಳ ಮೂಲಕ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಯತ್ನದ ಮೂಲಕ ನಮ್ಮ ಬದುಕು ಬದಲಾಯಿಸಿಕೊಳ್ಳಲು ಅವಕಾಶವಿದೆ. ನಮ್ಮ ಜನ್ಮಕುಂಡಲಿಯ ಮೂಲಕ ನಮ್ಮ ಬದುಕನ್ನು ಕಂಡುಕೊಂಡು ಸತ್ಕಾರ್ಯ ಅಥವಾ ಪರಿಹಾರದ ಮೂಲಕ ಬದಲಾಯಿಸಬಹುದು. ಜ್ಯೌತಿಷಯದಲ್ಲಿ ಇಂಥದ್ದನ್ನು ತಿಳಿದುಕೊಳ್ಳುವ ಪ್ರಯತ್ನವೇ ಪ್ರಶ್ನಜೌತಿಷ ಎಂದರು.