ನಂಜನಗೂಡಿನಲ್ಲಿ ಸಿಡಿದೆದ್ದ ಸಿದ್ದರಾಮಯ್ಯ ಬೆಂಬಲಿಗರು
ಸಂಜೆವಾಣಿ ವಾರ್ತೆ
ನಂಜನಗೂಡು: ಆ.19:- ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಮೂಡದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿ ಕ್ಯೂಸನ್ ಗೆ ಅನುಮತಿ ನೀಡಿದ್ದಾರೆ ಇದನ್ನು ಖಂಡಿಸಿ ಸಿದ್ಧರಾಮಯ್ಯ ಬೆಂಬಲಿಗರು ಪಕ್ಷದ ಕಾರ್ಯಕರ್ತರು ಮುಖಂಡರು ಸಿಡಿದಿದ್ದಾರೆ.
ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರು ಮತ್ತು ಮುಖಂಡರು ಪಟ್ಟಣದ ವಿಶ್ವೇಶ್ವರ ವೃತ್ತದ ಬಳಿ ಧಿಕ್ಕಾರ ಕೂಗಿ ರಸ್ತೆಯ ಮಧ್ಯದಲ್ಲೇ ಟೈರಿಗೆ ಬೆಂಕಿ ಹಾಕಿ ಮತ್ತು ರಾಜ್ಯಪಾಲರ ಭಾವಚಿತ್ರ ಸುಟ್ಟು ಹಾಕಿ ಪ್ರತಿಭಟನೆ ಮತ್ತು ಮಾನವ ಸರಪಳಿ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಪ್ರಾಸಿ ಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಯಾವುದೇ ತಪ್ಪು ಮಾಡಿಲ್ಲ ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಮಾಡುತ್ತಿದ್ದಾರೆ.
ಈ ಕುತಂತ್ರ ರಾಜಕಾರಣಕ್ಕೆ ನಾವುಗಳು ಬಗ್ಗುವುದಿಲ್ಲ ಸಿದ್ದರಾಮಯ್ಯ ಅವರ ಪರವಾಗಿ ಇಡೀ ಅಹಿಂದ ವರ್ಗವೇ ಬೆನ್ನಿಗೆ ನಿಂತಿದೆ ಇಂಥ ನೀಚ ರಾಜಕಾರಣವನ್ನು ಬಿಟ್ಟು ಕಾನೂನಾತ್ಮಕವಾಗಿ ಹೋರಾಟ ಮಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಎಲ್ಲಾ ಜನಾಂಗದ ಪರ ನಿಂತು ಉತ್ತಮ ಆಡಳಿತ ನೀಡಿದ್ದಾರೆ ಪುನಹ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದು ಸಹಿಸಲಾಗದೆ ಪಿತೂರಿ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಸಚಿವರು ಮತ್ತು ಶಾಸಕರ ವಿರುದ್ಧ ದೂರು ಬಂದಾಗಲು ಪ್ರಾಸೀ ಕ್ಯೂಷನ್ ಮಾಡಲು ಅನುಮತಿ ನೀಡಿದ್ದೀರಾ ನಮ್ಮ ನಾಯಕರ ವಿರುದ್ಧ ಖಾಸಗಿ ವ್ಯಕ್ತಿ ದೂರು ನೀಡಿದರೆ ತಕ್ಷಣವೇ ಆಲೋಚನೆ ಮಾಡದೆ ಸಲೆ ಮತ್ತು ತನಿಖೆ ನಡೆಸದೆ ಪ್ರಾಸಿ ಕ್ಯೂಷನ್ ಅನುಮತಿ ನೀಡಿದ್ದೀರಿ ಕಾರಣವೇನು ಎಂದರು ಏನೇ ಆದರೂ ಸರಿ ನಾವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿರುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕಳಲೆ ಕೇಸ್ವಮೂರ್ತಿ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಸಿಎಂ ಶಂಕರ್ ನಗರಸಭೆ ಸದಸ್ಯರಾದ ಗಂಗಾಧರ ಸಿದ್ದಿಕ್ ಮಹೇಶ್ ಗಾಯಿತ್ರಿ ಮುಖಂಡರಾದ ಶ್ರೀಧರ್ ವಿಜಯ್ ಕುಮಾರ್ ಮಂಜುನಾಥ ಅಜ್ಗರ್ ಖಾದರ್ ನಾಗೇಶ್ ರಾಜ್ ಮೂಗಶೆಟ್ಟಿ ಗೋವಿಂದರಾಜ್ ನಾಗರಾಜ್ ಸತೀಶ್ ಇಂಧನ ಬಾಬು ಸೇರಿದಂತೆ ಇತರರು ಇದ್ದರು.