ವೈದ್ಯೆ ಹತ್ಯೆ ಖಂಡಿಸಿ ಮೌನ ಬಿಜೆಪಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.19:- ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ವೈದ್ಯಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಮೈಸೂರು ಮಹಾನಗರ ಹಾಗೂ ಗ್ರಾಮಂತರ ಮಹಿಳಾ ಮೋರ್ಚಾ ವತಿಯಿಂದ ಮಹಿಳೆಯರು ಕ್ಯಾಂಡಲ್ ಲೈಟ್ಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ನಗರದ ಕಚೇರಿಯಿಂದ ಪ್ರಾರಂಭವಾದ ಜಾತಾ ಜಿಲ್ಲಾ ಪಂಚಾಯತ್ ಕಚೇರಿ ಮೂಲಕ ನ್ಯಾಯಾಲಯದ ಮುಂಭಾಗ ಗಾಂಧಿ ಪ್ರತಿಮೆಯ ಮುಂದೆ ದುಷ್ಕೃತ್ಯವನ್ನು ಖಂಡಿಸಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮೌನ ಪ್ರತಿಭಟನೆಯನ್ನು ಮಾಡಿ, ಮೃತ ಟ್ರೈನಿ ಡಾಕ್ಟರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿಯನ್ನು ಸಲ್ಲಿಸಿದೆವು..
ಮಹಿಳಾ ಮೋರ್ಚಾ ಮೈಸೂರು ಮಹಾನಗರದ ಅಧ್ಯಕ್ಷೆ ರೇಣುಕರಾಜ್ ಉಪಾಧ್ಯಕ್ಷರು ಡಾ. ಪ್ರಪುಲ ಮಲ್ಲಾಡಿ, ಮೈಸೂರು ಜಿಲ್ಲಾ ಗ್ರಾಮಂತರ ಮಹಿಳಾ ಮೋರ್ಚಾ ಅಧ್ಯಕ್ಷರಾದ ನಳಿನಿಗೌಡ, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ ಎಂ ರಘು,ಗ್ರಾಮಾಂತರ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ನಂದಿನಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಲಾ, ಮೈಸೂರು ನಗರ ಕಾರ್ಯಕಾರಿಣಿ ಸದಸ್ಯರಾದ ಲೀಲಾ ಶಣೈ, ಶುಭಶ್ರೀ , ಪುಷ್ಪ, ಅನಿತ, ಮಾಲಿನಿ, ಸವಿತಗೌಡ , ಹಾಗೂ ಎಲ್ಲಾ ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಮಹಿಳಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.