ಮಾರ್ಟಳ್ಳಿ ಸೇಂಟ್ ಮೇರಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆ
ಸಂಜೆವಾಣಿ ವಾರ್ತೆ
ಹನೂರು ಆ 19 :- ಮಾರ್ಟಳ್ಳಿ ಗ್ರಾಮದ ಸೆಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ನಡೆದ ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯ ದಿನದೊಂದು ಮುಖ್ಯ ಅತಿಥಿಯಾಗಿ ಅದೇ ಶಾಲೆಯ ಅಡಿಗೆ ಸಹಾಯಕಿ ಪೆÇನ್ನಮ್ಮ ರವರನ್ನು ಮುಖ್ಯ ಅತಿಥಿಯಾಗಿ ಅಹ್ವಾನಿಸುವ ಮೂಲಕ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗಿದೆ.
ಸೇಂಟ್ ಮೇರಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಂಗನವಾಡಿ ಸಹಾಯಕಿ (ದಲಿತ ಮಹಿಳೆ) ಇವರಿಂದ ಧ್ವಜಾರೋಹಣವನ್ನು ನೆರವೇರಿಸಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶ ನೀಡುವ ಮೂಲಕ ಸ್ವಾತಂತ್ರ್ಯದ ಬಗ್ಗೆ ತಿಳಿಸಿಕೊಡಲಾಗಿದೆ.
ಪೆÇನ್ನಮ್ಮ ಇವರು ಒಬ್ಬ ದಲಿತ ಮಹಿಳೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 78ನೇ ಸ್ವತಂತ್ರ ದಿನಾಚರಣೆಯು ನಿಜವಾದ ಸಮಾನತೆ, ಜಾತಿಯತಿತೆ, ಮಾನವೀಯತೆ ಮೆರೆದ ಶಾಲೆಯ ವ್ಯವಸ್ಥಾಪಕರು ಗೌರವಾನ್ವಿತ ಫಾದರ್ ಟೆನ್ನಿಕೋರಿಯನ್ ರವರ ಅಧ್ಯಕ್ಷತೆಯಲ್ಲಿ ನೆರವೇಸಿದರು.
ಈ ರಾಜ್ಯದಲ್ಲಿ ಈ ರೀತಿಯಲ್ಲಿ ಸಮಾನತೆಯನ್ನು ತೋರಿಸಿದ ಶಾಲೆ ಬೇರೊಂದು ಇಲ್ಲಾ ಎಂದು ಭವಿಸುತ್ತೇನೆ. ಈ ಸಮಾನತೆಯನ್ನು ಮೆರದ ಈ ಶಾಲೆಯ ವಿಯವಸ್ಥಾಪಕರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಫಾದರ್ ಟೆನ್ನಿಕುರೇನ್ ಅವರು ಸಮಾನತೆಯ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಶುಪಾಲರು, ಫಾತರ್, ಕ್ರಿಷ್ಟೋಪರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ನದಿಯ, ಸದಸ್ಯರು ರಾಮಲಿಂಗಂ ಮತ್ತು ಮುಖ್ಯ ಶಿಕ್ಷಕರು ಸುನಿಲ್ ಮಾರ್ಟಿನ್, ಮತ್ತು ಸೇಸುಆರೋಕ್ಯಮ್, ಅನ್ನೈ ನಾದನ್ ಹಾಗೂ ಸಿಸ್ಟರ್ ಸಿಂಧೂ ಸೈಮಾನ್, ಜೇನಿಪರ್ ಹಾಜರಿದ್ದರು.