ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ

ಉಜಿರೆ: ಅನ್ನದಾಸೋಹ,ಅರಿವುದಾಸೋಹ ಮತ್ತುಅಕ್ಷರದಾಸೋಹ ಎಂಬ ತ್ರಿವಿಧದಾಸೋಹದೊಂದಿಗೆ ಮನಪರಿವರ್ತನೆ ಮೂಲಕ ಕ್ರಾಂತಿಕಾರಿ ಸಮಾಜಸುಧಾರಣೆಯೊಂದಿಗೆ ಲೋಕಕಲ್ಯಾಣ ಕಾರ್ಯಗಳನ್ನು ನಿರಂತರ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರು ಸಾಧುಸಂತರಿಗಿಂತಲೂ ಮಿಗಿಲಾಗಿ ಎಲ್ಲರಿಂದಲೂದೇವಮಾನವರಾಗಿಗೌರವಿಸಲ್ಪಡುತ್ತಾರೆ. ಅವರದರ್ಶನದಿಂದದೇವರದರ್ಶನ ಮಾಡಿದಷ್ಟೇ ಸಂತೋಷ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದುತುಮಕೂರಿನಕಾರದೇಶ್ವರ ಮಠದಕಾರದ ವೀರಬಸವ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮತ್ತು ಅಖಿಲ ಕರ್ನಾಟಕಜನಜಾಗೃತಿ ವೇದಿಕೆಯಜಂಟಿಆಶ್ರಯದಲ್ಲಿ ಆಯೋಜಿಸಿದ ಮದ್ಯವ್ಯಸನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರ ಶತದಿನೋತ್ಸವದ ಸಂಭ್ರಮದ ನವಜೀವನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮದಪಾನದಂತಹ ವ್ಯಸನಗಳಿಗೆ ಬಿದ್ದವರನ್ನು ಮತ್ತು ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದೇ ನಿಜವಾದಧರ್ಮವಾಗಿದೆ. “ಮನೆಯೇ ಮೊದಲ ಪಾಠಶಾಲೆ,ತಾಯಿಯೇ ಮೊದಲ ಗುರು” ಎನ್ನುವಂತೆ ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಕಾರ್ಯವಾಗಬೇಕು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತಾ-ಪಿತರಂತೆ ಬಹಳ ಪ್ರೀತಿ-ವಿಶ್ವಾಸದಿಂದ ಸಮಾಜದ ಸರ್ವರಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮೂಲಕ ಮಹಿಳಾಸಬಲೀಕರಣ, ಕೆರೆಗಳ ಪುನಶ್ಚೇತನ, ಶುದ್ಧಕುಡಿಯುವ ನೀರಿನಘಟಕ, ಮನಪರಿವರ್ತನೆ ಮೂಲಕ ಮದವರ್ಜನ ಶಿಬಿರಗಳು, ಸ್ವ-ಉದ್ಯೋಗತರಬೇತಿಇತ್ಯಾದಿ ಸೇವಾ ಕಾರ್ಯಕ್ರಮಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿವೆಎಂದರು.
ತುಮಕೂರಿನಲ್ಲಿತಮ್ಮ ಮಠದ ಭಕ್ತರಾದಚಂದ್ರಶೇಖರ ಎಂಬವರು ಮದ್ಯವ್ಯಸನಿಯಾಗಿದ್ದು ಮದ್ಯ್ಯವರ್ಜನ ಶಿಬಿರಕ್ಕೆ ಸೇರಿ ವ್ಯಸನಮುಕ್ತರಾಗಿ ಈಗ ಎಂಜಿನಿಯರ್‌ರಾಗಿ ಸ್ವಂತಉದ್ಯಮದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನು ಸ್ವಾಮೀಜಿ ಉಲ್ಲೇಖಿಸಿ ಕಾರ್ಯಕರ್ತರ ಸೇವೆಯನ್ನು  ಶ್ಲಾಘಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮದವರ್ಜನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರು ಮನ, ವಚನ, ಕಾಯದಿಂದದೃಢ ಸಂಕಲ್ಪ ಮಾಡಿ ಮುಂದೆ ಸಾರ್ಥಕಜೀವನ ನಡೆಸಬೇಕು. ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಪರಿಶುದ್ಧರಾಗಿದೇವರದರ್ಶನ ಮಾಡಿಅನುಗ್ರಹ ಪಡೆದು ಮುಂದೆ ಸುಖ-ಶಾಂತಿ, ನೆಮ್ಮದಿಯಕೌಟುಂಬಿಕಜೀವನ ನಡೆಸಬೇಕುಎಂದು ಸಲಹೆ ನೀಡಿದರು. ವ್ಯಸನಮುಕ್ತರ ಭಾಗ್ಯದ ಬಾಗಿಲು ತೆರೆದಿದೆಎಂದುಅವರಿಗೆಉಜ್ವಲ ಭವಿಷ್ಯವನ್ನು ಹೆಗ್ಗಡೆಯವರು ಹಾರೈಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ಕೆ ಹರೀಶ್‌ಕುಮಾರ್ ಶುಭಾಶಂಸನೆ ಮಾಡಿರಾಷ್ಟ್ರಪಿತ ಮಹಾತ್ಮ್ಮಾಗಾಂಧೀಜಿ ಕನಸು ಕಂಡಗ್ರಾಮರಾಜ್ಯದ ಮೂಲಕ ರಾಮರಾಜ್ಯ ಹಾಗೂ ವ್ಯಸನಮುಕ್ತ ಭಾರತವನ್ನು ಹೆಗ್ಗಡೆಯವರು ಧರ್ಮಸ್ಥಳದ ಗ್ರಾಮಾಭಿವೃದ್ಧಿಯೋಜನೆ ಮೂಲಕ ಶೇ. ನೂರರಷ್ಟು ನನಸಾಗುವಂತೆ ಮಾಡಿದ್ದಾರೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದಗ್ರಾಮಾಭಿವೃದ್ಧಿಯೋಜನೆಯಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಶತದಿನೋತ್ಸವವನ್ನು ಆಚರಿಸಿದ ವ್ಯಸನಮುಕ್ತರುಜೀವನಪಯಂತಆತ್ಮಸಾಕ್ಷಿಗೆಅನುಗುಣವಾಗಿಉತ್ತಮಜೀವನ ನಡೆಸಬೇಕು.ತಮಗೆಯಾವುದೇ ಸಮಸ್ಯೆ ಬಂದರೂಯೋಜನಾಧಿಕಾರಿಅಥವಾಶಿಬಿರಾಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಸೂಕ್ತ ಪರಿಹಾರ ನೀಡಲಾಗುವುದುಎಂದು ತಿಳಿಸಿದರು.
ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯಡಾ. ಅಭಿಷೇಕ್‌ಚತುರ್ವೇದಿ ಮತ್ತುದೇರಳೆಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಡಾ. ಮೇಖಲಾ ದಿವಾಕರ್‌ಅವರುಮದ್ಯವರ್ಜನ ಶಿಬಿರಗಳ ಬಗ್ಗೆ ರಚಿಸಿದ ಸಂಶೋಧನಾ ಪ್ರಬಂಧಗಳನ್ನು ಡಿ. ವೀರೇಂದ್ರ ಹೆಗಡೆಯವರಿಗೆ ಅರ್ಪಿಸಿದರು.
ಮಂಗಳೂರಿನ ಡಾ. ಶ್ರೀನಿವಾಸ ಭಟ್,ಎಸ್. ಡಿ. ಸಂಪತ್ ಸಾಮ್ರಾಜ್ಯ,ಗ್ರಾಮಾಭಿವೃದ್ಧಿಯೋಜನೆಯಉಡುಪಿ ಪ್ರಾದೇಶಿಕಅಧಿಕಾರಿದುಗ್ಗೇಗೌಡ,ಜಿಲ್ಲಾಧ್ಯಕ್ಷ ಪದ್ಮನಾಭ ಭಟ್, ಸ್ಥಾಪಕ ಅಧ್ಯಕ್ಷ ವಸಂತಸಾಲಿಯಾನ್, ಕಾಸಿಂ ಮಲ್ಲಿಗೆಮನೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ವಿವೇಕ್ ವಿ. ಪಾಸ್, ಸ್ವಾಗತಿಸಿದರು. ಅಖಿಲ ಕರ್ನಾಟಕಜನಜಾಗೃತಿ ವೇದಿಕೆಯರಾಜ್ಯಾಧ್ಯಕ್ಷರಾಜಣ್ಣಕೊರವಿ ಧನ್ಯವಾದವಿತ್ತರು.
ಯೋಜನಾಧಿಕಾರಿಗಳಾದ ನಾಗೇಶ್ ಮತ್ತು ಭಾಸ್ಕರ್, ಎನ್. ಕಾರ್ಯಕ್ರಮ ನಿರ್ವಹಿಸಿದರು.