ಹಬೋಹಳ್ಳಿ : ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.18  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಲೀಸರು ತನಿಖೆಗೆ ಅನುಮತಿ ಕೇಳದಿದ್ದರೂ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲ  ಥಾವರ್ ಚಂದ್ ಗೆಹಲೋಟ್ ಅವರ ನಡೆ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು ತಕ್ಷಣವೇ ಪ್ರಾಸಿಕ್ಯೂಶನ್ ಅನುಮತಿಯನ್ನು ವಾಪಸ್ ಪಡೆಯಲು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು
. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ ಪ್ರಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ದೂರಿನ ಅನ್ವಯ
 ಪ್ರಕರಣವನ್ನು ತುರ್ತಾಗಿ ಪ್ರಾಸಿಕ್ಯೂಷನ್ ಗೆ ನೀಡಿರುವುದು ಖಂಡನೀಯ ಕೂಡಲು ವಾಪಸ್ ಪಡೆಯಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.
 ಕಾಂಗ್ರೆಸ್ ಮುಖಂಡ ಪುರಸಭೆ ಸದಸ್ಯ ಎಂ
 ಮರಿ ರಾಮಪ್ಪ ಮಾತನಾಡಿ ರಾಜಪಾಲರು ಕೇಂದ್ರ ಸರ್ಕಾರದ ಕೈಗಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರವನ್ನು ಅಭದ್ರ ಗೊಳಿಸುವ  ಹುನ್ನಾರ ನಡೆದಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ಪರವಾಗಿ ಹೈಕಮಾಂಡ್ ಮತ್ತು ಕರ್ನಾಟಕದ ಜನತೆ ಇದೆ ಎಂದರು.
 ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಮಾತನಾಡಿ ಮುಖ್ಯಮಂತ್ರಿ ವಿರುದ್ಧ   ದುರುದ್ದೇಶಪೂರ್ವಕ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು  ರಾಜಕಾರಣವಾಗಿದ್ದು ಬಹುಮತದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಉದ್ದೇಶ ಹೊಂದಿದ್ದು ರಾಜ್ಯಪಾಲರು ಕೇಂದ್ರದ ಕೈ ಗೊಂಬೆಯಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದು ತಕ್ಷಣವೇ ರಾಜ್ಯಪಾಲರು ಈ ನಿರ್ಧಾರವನ್ನು ವಾಪಸ್ ಪಡೆಯಲು ಪ್ರತಿಭಟನೆಯಲ್ಲಿ ಮಾತನಾಡಿ ಒತ್ತಾಯಿಸಿದರು
 ಈ ಸಂದರ್ಭದಲ್ಲಿಜಿ ಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪವಾಡಿ  ಹನುಮಂತಪ್ಪ, ಮುಖಂಡರಾದ ಕೆ ಮೈಲಾರಪ್ಪ, ಚಿoತ್ರ ಪಳ್ಳಿ ದೇವೇಂದ್ರಪ್ಪ, ಹುಚ್ಚಪ್ಪ ಅಲ್ಲಾಭಕ್ಷಿ, ಗುಂಡ್ರು ಹನುಮಂತಪ್ಪ, ಗುರುಬಸವರಾಜ್ ಸೊನ್ನದ್, ಕುರುಬರ ವೆಂಕಟೇಶ್, ಕರಿಗೇರ್  ಚಂದ್ರಪ್ಪ, ಗಣೇಶ ಜಂದಿಸಾಬ್ ಪ್ರಭಾಕರ ಖಾಸಿಂಸಾಬ್ ಅಜಿಜುಲ್ಲಾ, ನಜೀರ್, ಇತರರಿದ್ದರು