ವೈದ್ಯರ ನಿರ್ಲಕ್ಷ ಬೇಜವಬ್ದಾರಿ ತನದ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು :  ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ-ವಿಜಯನಗರ ಜಿಲ್ಲೆ :ಅ,18- ನಗರದ ತಾಯಿ-ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷತೆಯಿಂದ ಪಿ ಕೆ ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತಾಯಪ್ಪ ರವರ ಹೆಂಡತಿಯ ಹೆರಿಗೆ ಚಿಕಿತ್ಸೆಗೆಂದು ಬಂದ ತಾಯಿಯನ್ನು ಚಿಕ್ಸಿತ್ಸೆಗೆ ಮುಂದಾಗದ ಹಿನ್ನೆಲೆಯಲ್ಲಿ ಮಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ‌ ನಡೆಸಿದರು.
ಪಿಕೆ ಹಳ್ಳಿ ಗ್ರಾಮದಿಂದ ನಗರಕ್ಕೆ ತಡ ರಾತ್ರಿಯಲ್ಲಿ ಆಸ್ಪತ್ರೆಗೆ ಬರುವ ದಾರಿಯಲ್ಲಿ ಅಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದೆ ಆದರೆ ಆಸ್ಪತ್ರೆಗೆ ಬಂದ ಹೆರಿಗೆ ಯಾದ ತಾಯಿಯನ್ನು ವೈದ್ಯರು ಅಡ್ಮಿಟ್ ಮಾಡಿಕೊಳ್ಳದೆ ಬೇಜವಾಬ್ದಾರಿ ತನದ ಕಾರ್ಯದಿಂದ ಮಗುವಿನ ಉಸಿರಾಟ ತೊಂದರೆ ಉಂಟಾಗಿದೆ.  ಅದನ್ನು ಬೆಳಿಗ್ಗೆ ವರೆಗೆ ಹಾಗೆ ಕಾದು ಕುಳಿತ ಹೆರಿಗೆ ಪೆಶೆಂಟ್‌ನ ಸಂಬಂದಿಕರಿಗೆ ವೈದ್ಯರು ಬೆಳಿಗ್ಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ.
ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.  ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಧಿಕಾರಿಗಳು, ಈ ಕೂಡಲೇ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ತನದ ಕರ್ತವ್ಯ ನಿರ್ವಹಿಸಿದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ವಜಾಗೊಳಿಸಬೇಕು ಸಾರ್ವಜನಿಕರ ಹಿತ ಕಾಯಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ತುರ್ತು ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಕರ್ತವ್ಯ ನಿರ್ವಹಿಸಲು ಆಗ್ರಹಿಸುತ್ತೆನೆ ಎಂದು ಪ್ರತಿಭಟನೆಯಲ್ಲಿ  ಭರತ್ ಸೇರಿದಂತೆ ಪಾಲ್ಗೊಂಡಿದ್ದರು.
