ಬದುಕುವುದು ಬದುಕಲು ಸಹಕರಿಸುವುದೆ ನಿಜವಾದ ಸಹಕಾರ – ಉಜ್ಜಯಿನಿ ಶ್ರೀಗಳು.
ಸಂಜೆವಾಣಿ ವಾರ್ತೆ
ಹೊಸಪೇಟೆ:ಅ,18-  ಸ್ವಂತ ಸೂರನ್ನು ನಿರ್ಮಾಣ ಮಾಡುವುದು, ಅದರಲ್ಲಿ ವಾಸ ಮಾಡುವುದು ನಮ್ಮ ಸಾರ್ಥಕ ಬದುಕಿನ ಒಂದು    ಅವಿಸ್ಮರಣೀಯ ಕ್ಷಣ ಎಂದು ಉಜ್ಜಯಿನಿ ಸಿಂಹಾಸನಾಧೀಶ್ವರ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಹೇಳಿದರು.
ಶನುವಾರ ಹೊಸಪೇಟೆಯ ಸಹಕಾರಿ ಕಲ್ಯಾಣ ಮಂಟಪದಲ್ಲು ಹೊಸಪೇಟೆ ಗೃಹನಿರ್ಮಾಣ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಪೂಜ್ಯರು ಸಹಕಾರ ನಮ್ಮ ಜೀವನಾಡಿ ಬದುಕಿನ ಪ್ರತಿಕ್ಷಣದಲ್ಲಿಯೂ ಪ್ರತಿಹಂತಕ್ಕೂ  ಸಹಕಾರವಿಲ್ಲದಿದ್ದರೆ ಏನು ನಡೆಯದು, ನಾವು ಆಹಾರ ಬೆಳೆಯಲು ರೈತ, ಮಾರಾಟ ಮಾಡಲು ವ್ಯಾಪಾರಿ, ಆಹಾರ ಸಿದ್ಧಪಡಿಸಲು ತಾಯಿ,  ಸೇವಿಸುವುದಕ್ಕೆ  ಕೈಗಳು ಹೀಗೆ ಸಹಕಾರವಿಲ್ಲದಿದ್ದರೆ ಏನು ಆಗದು ಸಹಕಾರ ಆಂದೋಲನ ಒಂದು ಸಾಮಾಜಿಕ ಬದ್ಧತೆಯೊಂದಿಗೆ ನಡೆಯುವ ಕಾನೂನಾತ್ಮಕ ಚಳುವಳಿಯಾಗಿ ರೂಪುಗೊಳ್ಳಲು ಕರ್ನಾಟಕದ ಸೇವೆಗೆ ನಾವೆಲ್ಲಾ ಹೆಮ್ಮೆಪಡಬೇಕು ಎಂದರು.
ತುಂಗಭದ್ರಾ ಜಲಾಶಯದಲ್ಲಿ ಆದ ಅವಘಡ ತಜ್ಞರು ತಡೆಗಟ್ಟುವ ಕಾರ್ಯದಲ್ಲಿ ಫಲಿತ ಕಂಡಿರುವುದು ಉತ್ತಮ ಬೆಳವಣಿಗೆ ಒಂದು ಹೊಸ ಪ್ರಯತ್ನ ಈ ಭಾಗದ ರೈತರಿಗೆ ವರದಾನವಾಗಿದ್ದು ನಾಡಿನ ಎಲ್ಲವರ್ಗದ ಜನತೆಯ ಪರವಾಗಿ ಅವರಿಗೆ ಅಭಿನಂದನೆ, ಸರ್ಕಾರವೂ ಸಹ ಕಾರ್ಯೋನ್ಮುಖವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಸಹಕಾರಿಯ ಅಧ್ಯಕ್ಷ ಗೊಗ್ಗ ವಿಶ್ವನಾಥ ಮಾತನಾಡಿ ನಮ್ಮ ಹಿರಿಯರ ದೂರದೃಷ್ಟಿ ಇಂದು ಅನೇಕರ ನೆಮ್ಮದಿಗೆ ಸಹಕಾರಿಯಾಗಿದೆ ಆಎಲ್ಲಾ ಗಣ್ಯರ ಆಸೆಯದಂತೆ ಮುಂದಿನ ದಿನಗಳಲ್ಲಿ ಆರ್ಥಿಕ ಹೊರೆ ತಗ್ಗಿಸುವ ವಿನೂತನ ಯೋಜನೆಗಳ ಮೂಲಕ ಸಹಕಾರಿಯಲ್ಲಿ ಸಾರ್ವಜನಿಕ ಸೇವೆಯನ್ನು ಮುಂದುವರೆಸುತ್ತೇವೆ ಎಂದರು.
ಹುಡಾ ಅಧ್ಯಕ್ಷ ಹೆಚ್.ಎನ್.ಎಫ್ ಇಮಾಮ್ ನಿಯಾಜಿ ಮಾತನಾಡಿ ಒಂದು ಸಂಸ್ಥೆ ಅನೇಕರ ತ್ಯಾಗಗಳಿಂದ ನೂರು ವರ್ಷ ಪೂರೈಸಿದೆ ಈ ಸಂಸ್ಥೆಗೆ ಬೇಕಾಗುವ ಎಲ್ಲಾ ನೆರವನ್ನು ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕ ಜೆ.ಎಸ್.ವಿನಾಯಕ, ಸಹಾಯಕ ನಿಬಂಧಕ ಟಿ.ರವಿಕುಮಾರ, ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ರಹಿಮತವುಲ್ಲಾ ಹಾಜರಿದ್ದರು. ಇದೆ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಸ್ಮರಣ ಸಂಚಿಕೆಯ ಅಧ್ಯಕ್ಷ  ಭೂಪಾಳ ಪ್ರಹ್ಲಾದ್ ಗುರುಗಳಿಂದ ಶತಮಾನಂ ವಸತಿ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿದರು.
ಸಹಕಾರಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಅಧ್ಯಕ್ಷರು ಉಪಾಧ್ಯಕ್ಷರನ್ನು ಇದೆ ಸಂದರ್ಭದಲ್ಲಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಹಕಾರಿಯ ನಿರ್ದೇಶಕರು, ಹಿರಿಯ ಸಹಕಾರಿಗಳು, ಸದಸ್ಯರು, ಇಲಾಖೆಯ ಹಿರಿಯರು ನಗರದ ಗಣ್ಯರು ಉಪಸ್ಥಿತರಿದ್ದರು ಸಮಾರಂಭದ ಅಧ್ಯಕ್ಷ ಅಶ್ವಿನ್ ಕೊತಂಬರಿ ಸ್ವಾಗತಿಸಿದರು,‌  ಕೊನೆಯಲ್ಲಿ ಉಪಾಧ್ಯಕ್ಷ ಕಾಕುಬಾಳ ರಾಜೇಂದ್ರ ವಂದಿಸಿದರು.