ಸಿದ್ದ ತಿನಿಸುಗಳ ಮಾರಾಟ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,18- ನಗರದ ಶುಭ ಮಸ್ತು  ಒಕ್ಕೂಟದಿಂದ  ವರಮಹಾಲಕ್ಷ್ಮಿ   ಪೂಜೆ ಅಂಗವಾಗಿದ್ದು ಸಿದ್ದ ತಿನಿಸುಗಳಾದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಸೇರಿದಂತೆ  ವಿವಿಧ ತರಕಾರಿ ಪಲ್ಯಗಳು, ಚಟ್ನಿ ಪುಡಿಗಳು, ಸಿಹಿ ತಿಂಡಿಗಳು ಮಾರಾಟ ಮತ್ತು ಪ್ರದರ್ಶನಕ್ಕೆ  ಮೇಯರ್ ನಂದೀಶ್ ಚಾಲನೆ ನೀಡಿದರು.
ಈ ವೇಳೆ ಪಾಲಿಕೆ ಸದಸ್ಯ ಕೆ. ಹನುಮಂತಪ್ಪ  ಸುಭಾನ್ ಅಲ್ಲ ಸ್ವಸಹಾಯ ಸಂಘ ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಇದ್ದಾರೆ.   ನಾವು ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವುದಾಗಿ  ಹೇಳಿದ್ದರು
ಶುಭ ಮಸ್ತು ಪ್ರದೇಶ ಮಟ್ಟದ ಒಕ್ಕೂಟ ಅಧ್ಯಕ್ಷೆ ಸುಮಾ ರೆಡ್ಡಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು‌