ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯಬಾರದು
ಧಾರವಾಡ,ಆ18: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ಅಗಸ್ಟ್ 15, 2024 ರಂದು 78ನೇ ಸ್ವಾತಂತ್ರ್ಸೋವದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರು ಸಿ ರವರು ಧ್ವಜಾರೋಹಣಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ರಾಷ್ಟ್ರದ ಅಭಿವೃದ್ದಿ ಸಾಧ್ಯ, ನಾವೆಲ್ಲರೂ ಒಂದು ಎನ್ನುವ ಭಾವನೆ ಎಲ್ಲರಲ್ಲೂ ಬೆಳಸಿಕೊಳ್ಳಬೇಕೆಂದು ತಿಳಿಸಿದರು. ಭಾರತ ದೇಶಕ್ಕೆ ಸ್ವಾತಂತ್ರ್ಯ ಬರಲು ಅನೇಕ ಹೋರಾಟಗಾರರು ತಮ್ಮ ಅಮೂಲ್ಯ ಜೀವನವನ್ನು ತ್ಯಾಗಮಾಡಿದ್ದಾರೆ, ಇವರನ್ನು ಎಂದಿಗೂ ಮರೆಯಬಾರದೆಂದರು. ವಿಶ್ವದಲ್ಲಿ ಭಾರತವು ಎಲ್ಲ ರಂಗಗಳಲ್ಲಿಯೂ ಮುಂಚುಣಿಯಲ್ಲಿ ಸಾಗುತ್ತಿದ್ದು ಇದಕ್ಕೆ ಎಲ್ಲರ ಕೊಡುಗೆಯು ಕಾರಣ, ಮತ್ತು ಇನ್ನು ಮುಂದೆಯೂ ಪ್ರತಿಯೊಬ್ಬರು ಭಾರತದ ಅಭಿವೃದ್ದಿಗಾಗಿ ಸಹಕರಿಸಬೇಕೆಂದರು. ಇಡೀ ವಿಶ್ವಕ್ಕೆ ಭಾರತ ದೇಶವು ಒಂದು ಮಾದರಿ ರಾಷ್ಟ್ರವಾಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಮ್ಹಾನ್ಸ್ ಸಂಸ್ಥೆಯು ರೋಗಿಗಳಿಗೆ ನೀಡುತ್ತಿರುವ ಗುಣಾತ್ಮಕ ಸೌಲಭ್ಯಗಳ ಬಗ್ಗೆ ಮಾತನಾಡಿ, ಡಿಮ್ಹಾನ್ಸ್ ಸಂಸ್ಥೆಯಿಂದ ಲಕ್ಷಾಂತರ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದು ಈ ಸಂಸ್ಥೆಯು ಬಡವರ ಪಾಲಿಗೆ ಸಂಜೀವಿನಿಯಾಗಿದೆಯೆಂದರು. ಡಿಮ್ಹಾನ್ಸ್ ಸಂಸ್ಥೆಯಲ್ಲಿ ಆದ ಅಭಿವೃದ್ದಿ ಚಟುವಟಿಕೆಗಳ ಬಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಈ ಸಂಸ್ಥೆಯಲ್ಲಿ ಆದಂತಹ ಅಭಿವೃದ್ದಿಗಳ ಬಗ್ಗೆ ಮತ್ತು ಸಮುದಾಯ ಆಧಾರಿತ ಮಾನಸಿಕ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಹೆಚ್ಚಿನ ನಿಟ್ಟಿನಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷರಾದ ಡಾ.ರಾಘವೇಂದ್ರ ನಾಯಕ್, ಸಹಾಯಕ ಆಡಳಿತಾಧಿಕಾರಿಗಳಾದ ವಿಜಯಲಕ್ಷ್ಮೀ ತೋರಗಲ್‍ಮಠ, ವೈದ್ಯಕೀಯ ಅಧಿಕ್ಷಕರಾದ ರವಿಕುಮಾರ ಉಪ್ಪಿನ್, ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ರಂಗನಾಥ ಕುಲಕರ್ಣಿ, ಸಹ ಪ್ರಾಧ್ಯಾಪಕರಾದ ಡಾ.ಆದಿತ್ಯ ಪಾಂಡುರಂಗಿ, ಡಾ.ಶ್ರೀನಿವಾಸ ಕೊಸಗಿ, ಡಾ.ಮಂಜುನಾಥ ಭಜಂತ್ರಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಸ್ವಪ್ನ ಪಾಂಡುರಂಗಿ, ಡಾ.ಮೇಘಮಾಲಾ ತಾವರಗಿ ಭಾಗವಹಿಸಿದ್ದರು.