ಖರೀದಿ ಕೇಂದ್ರ ಆರಂಭಿಸಲು ಮನವಿ
ಲಕ್ಷ್ಮೇಶ್ವರ, ಆ18: ಹೆಸರು ಖರೀದಿ ಕೇಂದ್ರವನ್ನು ಆರಂಭಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ರೈತರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ಈಗಾಗಲೇ ಶೇಕಡ 60ರಷ್ಟು ಫಸಲು ರೈತರ ಕೈಗೆ ಬಂದಿದ್ದು ಮುಕ್ತ ಮಾರುಕಟ್ಟೆಯಲ್ಲಿ ಬೆಲೆಗಳು ಏರಳಿತವಾಗುತ್ತಿರುವುದರಿಂದ ರೈತರು ಹಾನಿಯನ್ನು ಅನುಭವಿಸಬೇಕಾಗಿದೆ ಆದ್ದರಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಟಾಕಪಸಾತಪೂತೆ ಹೇಳಿದರು.
ಮನವಿ ಪತ್ರ ಸ್ವೀಕರಿಸಿದ ತಹಸಿಲ್ದಾರ್ ಮಂಜುನಾಥ ಅಮಾಸಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಮಾಲತೇಶ ಪಾಟೀಲ ಶಿವಲಿಂಗಪ್ಪ ಕಟಗಿ ಆದಿ ಶ ಹುಲಗೂರ ಎಸ್ ಬಿ ರೊಳ್ಳಿ ನೀಲನಗೌಡ ಪಾಟೀಲ ವಸಂತ ಗೌಡ್ರು ಕರಿ ಗೌಡ ಚಂದ್ರು ಗೌಡ ಕರಿಗೌಡ್ರು ಅಜಯ್ ಎಚ್ ಕೆ ಪರಮೇಶಪ್ಪ ಹುಲಕೋಟಿ ಅರುಣ ಬೆಳಗಲಿ ಬಸವರಾಜ ಅಂಗಡಿ ಸೇರಿದಂತೆ ಅನೇಕರಿದ್ದರು.