ಸೈದಾಪುರ: ೯ ಅಂಗಡಿಗಳಿಗೆ ಬೆಂಕಿ ಅಪಾರ ಪ್ರಮಾಣದಲ್ಲಿ ಹಾನಿ
ಸೈದಾಪುರ,ಆ.೧೯- ಬೆಳಗಿನ ಜಾವ ೫-೧೫ ಕ್ಕೆ ಪಟ್ಟಣದ ವಿವಿಧ ಅಂಗಡಿಗಳಿಗೆ ಸಂಬವಿಸಿದ ಬೆಂಕಿ ಅವಘಡದಿಂದ ಅಪಾರ ಅಪಾರ ಪ್ರಮಾಣದಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ.
ಇಲ್ಲಿನ ರಾಯಚೂರ ಮುಖ್ಯರಸ್ತೆಗೆ ಹೊಂದಿಕೊAಡಿರುವ ೯ ಅಂಗಡಿಗಳಿಗೆ ಬೆಂಕಿ ತಗಲಿದೆ. ಸುದ್ದಿ ತಿಳಿದು ಯಾದಗಿರಿ ಅಗ್ನಿಶಾಮಕ ದಳದ ತಂಡ ದಾವಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿಯನ್ನು ತಡೆಯುವಲ್ಲಿ ಯಶ್ವಿಯಾಗಿದ್ದಾರೆ.
ಬೆಂಕಿ ಅವಘಡದಲ್ಲಿ ಜನರಲ ಸ್ಟೋರ. ಮೊಬೈಲ ಶಾಪ, ಬೈಕ ರಿಪೇರಿ ಗ್ಯಾರೇಜ, ಹೋಟಲ ಸೇರಿದಂತೆ ಒಟ್ಟು ೯ ವಿವಿಧ ಅಂಗಡಿಗಳಲ್ಲಿ ನಷ್ಟವಾಗಿದೆ.
ಸೈದಾಪುರ ಪೊಲೀಸ ಠಾಣೆಯ ಅರಕ್ಷಕ ನಿರೀಕ್ಷಕರಾದ ವಿನಾಯಕ ನಾಯಕ ಹಾಗೂ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆಯಿಂದ ನಷ್ಟದ ನಿಖರ ಪ್ರಮಾಣ ಹಾಗೂ ಬೆಂಕಿಗೆ ಕಾರಣವಾದ ಅಂಶ ಬೆಳಕಿಗೆ ಬರಲಿದೆ.