ಹಣ ದುರ್ಬಳಕೆ: ಪಿಡಿಓ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾ.ಪಂ ಸದಸ್ಯರಿಂದ ಧರಣಿ ಸತ್ಯಾಗ್ರಹ
ಔರಾದ : ತಾಲೂಕಿನ ಲಾಧಾ ಗ್ರಾಮ ಪಂಚಾಯಿತಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿಯ ಹಣಕಾಸು ಅನುದಾನ ದುರ್ಬಳಕೆಗೆ ಕಾರಣರಾದವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಾಗೂ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಾಲೂಕು ಪಂಚಾಯತಿ ಎದುರಿಗೆ ಸಾಂಕೇತಿಕ ಧರಣಿ ನಡೆಸಿದರು.
ತಾಲೂಕಿನ ಲಾಧಾ ಗ್ರಾಮ ಪಂಚಾಯಿತಿಯ ಐದು ಗ್ರಾಮಗಳ ಅಭಿವೃದ್ಧಿಗೆ ಮೀಸಲು ಇದ್ದ ಅನುದಾನವನ್ನು ದುರ್ಬಳಕೆ ಮಾಡಿ ಗ್ರಾಮಗಳ ಅಭಿವೃದ್ಧಿ ಕಡೆಗಣಿಸಿದ್ದಾರೆ, ಮುಸ್ತಾಪೂರ ಗ್ರಾಮದಲ್ಲಿ ಸುಮಾರು ದಿನಗಳಿಂದ ನೀರಿನ ಸಮಸ್ಯೆ ಇದೆ, ಆದರೆ ಮುಸ್ತಾಪೂರ ಗ್ರಾಮದಲ್ಲಿ ನೀರು ನಿರ್ವಹಣೆಗೆಂದು ಬಂದ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಈ ಕೂಡಲೇ ಗ್ರಾಮ ಪಂಚಾಯತಿಗೆ ಸಂಬAಧಪಟ್ಟ ಅಂಶಗಳನ್ನು ಕುಲಂಕುಶವಾಗಿ ತನಿಖೆ ನಡೆಸಿ, ತೆಗೆದಿರುವ ಹಣ ಎಲ್ಲಿ ಮತ್ತು ಯಾವ ಸ್ಥಳ, ಯಾವ ಗ್ರಾಮ ಎಂದು ಜಿಪಿಎಸ್. ಛಾಯಾಚಿತ್ರ ಸಮೇತ ನಮ್ಮ ಉಪಸ್ಥಿತಿಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಂಡು, ಸೇವೆಯಿಂದ ವಜಾಗೊಳಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಿರೇಂದ್ರಸಿAಗ ಠಾಕೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಜಾಬಾ, ಸುನೀಲ ರಾಠೋಡ,ಯಶ್ವಂತರಾವ ಪಾಟೀಲ, ಈರಮ್ಮ ಶಂಕರ, ಪ್ರಕಾಶ ಸೈಬಣ್ಣಾ ಪ್ರಕಾಶ ಸೈಬಣ್ಣಾ, ದಸಂಸ ಸಂಚಾಲಕ ಸುಭಾಷ ಲಾಧಾ,
ಮಾಲ್ಹಾರಿ ಮುಸ್ತಾಪೂರ, ರಮೇಶ ಬಾವುಗೆ, ಬಾಬುರಾವ ಮುಚಳಂಬೆ, ದೇವದಾಸ ,ರಾಮಶೆಟ್ಟಿ ವಾಡೆಕರ್, ಸಂತೋಷ್, ರೇವಣಪ್ಪ, ಶಾಮರಾವ್, ಬದ್ರಯ್ಯ ಸ್ವಾಮಿ, ಉಮಾಕಾಂತ್ ಪಾಟೀಲ್, ಬಾಲಾಜಿ, ಗಂಗಶೆಟ್ಟಿ ಬಿರಾದಾರ್,ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮಗಳ ಜನರು ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.