ಸಂವಿಧಾನದ ಮೇಲೆ ಗೌರವವಿದ್ದರೆ ರಾಜೀನಾಮೆ ನೀಡಲಿ: ಭಗವಂತ ಖೂಬಾ
ಬೀದರ್,ಆ.೧೮-ಸಂವಿಧಾನದ ಬಗ್ಗೆ, ನ್ಯಾಯಂಗದ ಬಗ್ಗೆ ನಿಜವಾಗಿಯೂ ಮುಖ್ಯಂಮತ್ರಿ ಸಿದ್ದರಾಮಯ್ಯನವರಿಗೆ ಗೌರವವಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು, ಇಲ್ಲವಾದಲ್ಲಿ ಈ ಘಟನೆ ಇವರ ೪೦ ವರ್ಷಗಳ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಗಲಿದೆ ಹಾಗೂ ಇವರ ೪೦ ವರ್ಷಗಳ ರಾಜಕೀಯ ಜೀವನಕ್ಕೆ ಭಂಗ ತರಲಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿದ್ಧಾರೆ.
ಸಿದ್ದರಾಮಯ್ಯನವರು ನಾನೊಬ್ಬ ಸಮಾಜವಾದಿ ಎಂದು ಹೇಳಿಕೊಂಡು ಕೇವಲ ದಲಿತರನ್ನು, ಹಿಂದೂಳಿದವರನ್ನು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ, ಇಂದು ದಲಿತರ ಜಮೀನು ಹೊಡೆದು, ಅದನ್ನು ಮುಡಾಗೆ ಕೊಟ್ಟು, ಒಳ್ಳೆಯ ಬೆಲೆ ಬಾಳುವ ೧೪ ಸೈಟುಗಳು ಪಡೆದುಕೊಂಡಿದ್ದಾರೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಘನವೆತ್ತ ರಾಜ್ಯಪಾಲರು ಪಡೆದುಕೊಂಡು ಇಂದು ಕಾನುನು ಕ್ರಮಕ್ಕೆ ಆದೇಶಿಸಿದ್ದಾರೆ
ಆದ್ದರಿಂದ ಸಿದ್ದರಾಮಯ್ಯನವರು ಸತ್ಯ ಹರಿಶ್ಚಂದ್ರರAತೆ ವರ್ತಿಸದೆ, ಪಾಲಿಗೆ ಬಂದಿದ್ದನ್ನು ಸ್ವಿಕರಿಸಿ, ಕಾನುನು ಪ್ರಕ್ರೀಯೆ ಮುಗಿಯುವವರೆಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲ, ಇದು ಸಂವಿಧಾನಕ್ಕೆ ಮಾಡುವ ಅಪಮಾನವಾಗಿದೆ ಎಂದು ಖೂಬಾ ತಿಳಿಸಿದ್ದಾರೆ.