ರಾಜ್ಯಪಾಲರ ವಿರುದ್ಧ ಪ್ರತಿಭಟನಾ ರ‍್ಯಾಲಿ
ವಿಜಯಪುರ ,ಆ ೧೮: ನಗರದ ಗಾಂಧಿ ಚೌಕದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕರ್ನಾಟಕ ರಾಜ್ಯದ ರಾಜ್ಯಪಾಲರ ವಿರುದ್ಧ ಪ್ರತಿಭಟನಾ ರ‍್ಯಾಲಿಯನ್ನು ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ತೇಜೋವಧೆಮಾಡುವ ಉದ್ದೇಶದಿಂದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ ರಾಜ್ಯಪಾಲರ ಈ ನಡೆಯನ್ನು ಖಂಡಿಸಿ ಪ್ರತಿಭಟನೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ, ಅಹಿಂದ ಸಂಘಟನೆಯವರು ಹಾಗೂ ಪ್ರಗತಿ ಸಂಘಟನೆಯ ವತಿಯಿಂದ ಪ್ರತಿಭಟನೆಮಾಡಲಾಯಿತು.
ಸೋಮನಾಥ ಕಳ್ಳಿಮನಿ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಗುರನಗೌಡ ಪಾಟೀಲ, ಅಬ್ದುಲ ರಜಾಕ ಹೊರ್ತಿ, ಸಂಜೀವ ಕೊಂಬೋಗಿ, ಆರತಿ ಶಹಪೂರ, ಡಾ. ರವಿ ಬಿರಾದಾರ, ಎಸ್. ಎಂ. ಪಾಟೀಲ ಗಣಿಹಾರ, ಮಹಮ್ದ ರಫೀಕ ಟಪಾಲ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಡಿ. ಎಲ್. ಚವ್ಹಾಣ, ಸಂಗನಗೌಡ ಹರನಾಳ, ನಗರ ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಸುರೇಶ ಗೊಣಸಗಿ, ಬೀರಪ್ಪ ಸಾಸನೂರ, ಮಲ್ಲು ಬಿದರಿ, ಸಾಹೇಬಗೌಡ ಬಿರಾದಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೋಡೆ, ಜಾಕೀರ ಮುಲ್ಲಾ, ಎಂ. ಎಂ. ಮುಲ್ಲಾ ದ್ಯಾಬೇರಿ, ಫಯಾಜ ಕಲಾದಗಿ, ದೇಸು ಚವ್ಹಾಣ, ಬಿ. ಎಸ್. ಗಸ್ತಿ, ಸತೀಶ ಅರವಿ, ಐಜಾಜ ಮಕ್ಬಿಲ್ ಸಾದತ್, ಗಂಗೂಬಾಯಿ ಧುಮಾಳೆ, ಜಯಶ್ರೀ ಭಾರತೆ, ಸರಿತಾ ಚವ್ಹಾಣ, ಆಸ್ಮಾ ಕಾಲೇಬಾಗ, ಕಾಶಿಬಾಯಿ ಹಡಪದ, ರಮೇಶ ಭಂಟನೂರ, ಲಾಲಸಾಬ ಕೋರಬು, ಮಹಾನಗರಪಾಲಿಕೆ ಸದಸ್ಯರಾದ ಆಶೀಫ ಶಾನವಾಲೆ, ಅಪ್ಪು ಪೂಜಾರಿ, ಪರಶುರಾಮ ಹೊಸಮನಿ, ಮಾದೇವ ರಾಠೋಡ, ಸಂತೋಷ ಚವ್ಹಾಣ, ಅಬೂಬಕರ ಕಂಬಾಗಿ, ನಿಂಗಪ್ಪ ಸಂಗಾಪೂರ, ಫೈರೋಜ ಶೇಖ, ವೀರೇಶ ಕಲಾಲ, ಲಕ್ಷಿö್ಮÃ ಕ್ಷೀರಸಾಗರ, ಗೌಸ ಮುಜಾವರ, ಲಕ್ಷö್ಮಣ ಇಲಕಲ್, ಮಂಜುನಾಥ ನಿಡೋಣಿ, ಕೆ. ಎಸ್. ಪಾರಶೆಟ್ಟಿ, ಸೈಕ್ಲೇನ ಪಟೇಲ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.