ವಿಜೃಂಭಣೆ ಮಂಡಲ ಪೂಜೆ,ಸಂಗೀತೋತ್ಸವ
ಮಾಲೂರು ಆ೧೭: ತಾಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ಸದ್ಗುರು ಶ್ರೀ ಯೋಗಿ ನಾರಾಯಣ ಸ್ವಾಮಿ ಮತ್ತು ಶ್ರೀ ಅಮರನಾರಾಯಣಸ್ವಾಮಿ ದೇವಾಲಯ ೪೮ನೇ ದಿನದ ಮಂಡಲ ಪೂಜೆ ಮತ್ತು ಸಂಗೀತೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ರಾಜೇನಹಳ್ಳಿ ಗ್ರಾಮದ ಬಳಿ ಸದ್ಗುರು ಶ್ರೀ ಯೋಗಿ ನಾರಾಯಣಸ್ವಾಮಿ ಮತ್ತು ಶ್ರೀ ಅಮರನಾರಾಯಣ ಸ್ವಾಮಿ ದೇವಾಲಯವನ್ನು ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ನಿರ್ಮಿಸಿದ್ದು, ದೇವಾಲಯ ನಿರ್ಮಾಣಗೊಂಡು ೪೮ ದಿನಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ೪೮ನೇ ದಿನದ ಮಂಡಲ ಪೂಜೆ ಮತ್ತು ಸಂಗೀತೋತ್ಸವ ಕಾರ್ಯಕ್ರಮವನ್ನು ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿತ್ತು, ಬೆಳಗ್ಗೆಯಿಂದ ಸಂಜೆಯವರೆಗೆ ಭಜನೆ ಸಂಗೀತ ಗಾಯನ ತಂಡಗಳು ಭಾಗವಹಿಸಿ ಸಂಗೀತೋತ್ಸವವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಶಾಸಕ ಕೆ.ವೈ.ನಂಜೇಗೌಡ, ತಾ.ಪಂ.ಮಾಜಿ ಸದಸ್ಯ ಅಬ್ಬಯ್ಯ, ಶ್ರೀ ಯೋಗಿ ನಾರಾಯಣ ಸ್ವಾಮಿ ಆಶ್ರಮ ಅಭಿವೃದ್ಧಿ ಟ್ರಸ್ಟ್ ತಾನಪ್ಪ ಸ್ವಾಮಿಗಳು ಗೌರವಾಧ್ಯಕ್ಷ ಎಂ.ಎಂ.ಮಹೇಶ್ ಕುಮಾರ್, ಕಾರ್ಯದರ್ಶಿ ಆರ್‌ಎ ಮುರಳಿ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ನಂಜುಂಡೇಗೌಡ, ನಾರಾಯಣಗೌಡ, ಇನ್ನಿತರರು ಹಾಜರಿದ್ದರು. ವಿದ್ವಾನ್ ವಾನರಾಸಿ ಬಾಲಕೃಷ್ಣ ಭಾಗವತಾರ್, ತಬಲ ಸೋಮು, ನಟರಾಜ್, ಮಹೇಶ್ ಕುಮಾರ್, ಬ್ರಹ್ಮಾಚಾರಿ, ಪ್ರೀಯಾ ಬ್ರಹ್ಮ, ವೇಣು, ಮಂಜು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪೋಟೊ ೫. ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ಸದ್ಗುರು ಶ್ರೀ ಯೋಗಿ ನಾರಾಯಣ ಸ್ವಾಮಿ ಮತ್ತು ಶ್ರೀ ಅಮರನಾರಾಯಣಸ್ವಾಮಿ ದೇವಾಲಯ ೪೮ನೇ ದಿನದ ಮಂಡಲ ಪೂಜೆ ಮತ್ತು ಸಂಗೀತೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.