ಮುಡಾ ಹಗರಣ ಸಿಎಂ ರಾಜಖನಾಮೆ ನೀಡಲಿ: ಶ್ರೀವತ್ಸ
ಸಂಜೆವಾಣಿ ನ್ಯೂಸ್
ಮೈಸೂರು: ಆ.18: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಅನೇಕರು ತಮ್ಮ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದು, ಸಿಎಂ ಸಿದ್ದರಾಮಯ್ಯ ಸಹ ರಾಜೀನಾಮೆ ನೀಡಿ ಕಾನೂನಾತ್ಮಕ ತನಿಖೆ ಎದುರಿಸಲಿ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ನಡೆದಿರುವ ಬಹುಕೋಟಿ ನಿವೇಶನ ಹಂಚಿಕೆ ಹಗರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಸಚಿವರು, ಮುಖಂಡರು ಸಿಎಂ ಸಿದ್ದರಾಮಯ್ಯನವರನ್ನು ಮುಂದಿಟ್ಟುಕೊಂಡು ಬಚಾವ್ ಆಗಲು ಪ್ರಯತ್ನ ನಡೆಸುತ್ತಿದ್ದಾರೆ, ಇದಕ್ಕೆ ಸಿದ್ದರಾಮಯ್ಯ ಅವಕಾಶ ನೀಡಬಾರದು. ಸಿಎಂ ನೇತೃತ್ವದ ಸರ್ಕಾರ ಕಾನೂನು ಬೆಂಬಲಕ್ಕೆ ಸಹಕರಿಸಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಯ ಜಮೀನಿಗೆ ಬದಲಾಗಿ ಕೇವಲ ಎರಡು ನಿವೇಶನಗಳನ್ನು ಮಾತ್ರ ಪಡೆಯಲು ಅವರು ಅರ್ಹರು ಎಂದು ಕಾನೂನು ಹೇಳಿದರೂ, ಸಮಾನಂತರ ಪ್ರದೇಶದಲ್ಲಿ ನಿವೇಶನಗಳು ಲಭ್ಯವಿಲ್ಲ ಎಂದು ಸುಳ್ಳು ಹೇಳಿ ಮೈಸೂರಿನ ವಿಜಯನಗರದಲ್ಲಿ ಕೋಟ್ಯಾಂತರ ರೂ ಬೆಲೆಬಾಳುವ 14 ಸೈಟ್‍ಗಳನ್ನು ಪಡೆದುಕೊಂಡಿದ್ದಾರೆ. ಆದರೆ ನಾವು ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದಾಗ, ಅವರ ಜಮೀನಿಗೆ ಬದಲಾಗಿ ಸಮಾನಂತರ ಪ್ರದೇಶದಲ್ಲಿ 590 ಸೈಟ್‍ಗಳು ಲಭ್ಯವಿದೆ. ಆದರೆ ಅಲ್ಲಿ ಪಡೆದಿಲ್ಲ. ಸಿಎಂ ಸಿದ್ದರಾಮಯ್ಯನವರು ಬದಲಿ ನಿವೇಶನಗಳನ್ನು ಪಡೆದಿರುವುದನ್ನು ಆಧಾರವಾಗಿಟ್ಟುಕೊಂಡೇ ಕಾಂಗ್ರೆಸ್‍ನ ಹಲವು ಮುಖಂಡರು, ಸಚಿವರು ಮುಡಾದಲ್ಲಿ ಸೈಟ್‍ಗಳ ಹಗರಣ ಮಾಡಿದ್ದಾರೆ. ಅದನ್ನು ಮುಚ್ಚಿ ಹಾಕಿಕೊಳ್ಳಲು ಸಿಎಂ ಸಿದ್ದರಾಮಯ್ಯನವರ ಪತ್ನಿ ಪಡೆದಿರುವ 14 ಸೈಟ್‍ಗಳ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ. ಪಡೆದಿರುವ 14 ಸೈಟ್‍ಗಳು ಕಾನೂನು ಬಾಹಿರ ಎಂದು ಗೊತ್ತಾಗಲೇ ಆ ಸೈಟ್‍ಗಳನ್ನು ಸಿದ್ದರಾಮಯ್ಯನವರು ಮುಡಾಗೆ ವಾಪಾಸ್ ನೀಡಿದ್ದರೆ, ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಅವರ ಈ ಹಿಂದಿನ ಪರಿಸ್ಥಿತಿಗೆ ಅವರ ಸುತ್ತ ಮುತ್ತ ಇರುವವರೇ ಕಾರಣ ಎಂದು ಆರೋಪಿಸಿದರು.
14 ಸೈಟ್‍ಗಳನ್ನು ಮುಡಾದಿಂದ ಪತ್ನಿ ಪಾರ್ವತಿ ಪಡೆದಿರುವುದು ಕಾನೂನು ಬಾಹಿರವಾಗಿದೆ ಎಂದು ಗೊತ್ತಿದ್ದರೂ ಸಿಎಂ ಸಿದ್ದರಾಮಯ್ಯನವರು ಹಠಕ್ಕೆ ಬಿದ್ದಿದ್ದಾರೆ. ಸೈಟು ನೀಡಿದ ಅಂದಿನ ಇಬ್ಬರು ಮುಡಾ ಆಯುಕ್ತರುಗಳನ್ನು ಸಸ್ಪೆಂಡ್ ಮಾಡದೆ, ಅವರ ಮೇಲೆ ಕ್ರಿಮಿನಲ್ ಕೇಸ್‍ಗಳನ್ನು ಹಾಕದೆ, ಬಂಧಿಸಿದೆ ಹಾಗೆಯೇ ಬಿಟ್ಟಿದ್ದಾರೆ. ಅವರನ್ನು ರಕ್ಷಣೆ ಮಾಡಲು ಹೋಗಿ ಸಿದ್ದರಾಮಯ್ಯನವರೇ ಈಗ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದನದಲ್ಲಿ ಉತ್ತರ ನೀಡದೆ, ದೇಸಾಯಿ ಆಯೋಗ ರಚಿಸಿದ್ದೇನೆ ಮಾತನಾಡಲ್ಲ ಎಂದು ಸದನದಿಂದ ಹೊರಬಂದು ಪ್ರೆಸ್ ಮೀಟ್ ಮಾಡಿ 2 ಗಂಟೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿತ ಶತ್ರುಗಳ ಮಾತು ಕೇಳಿದ ಪರಿಣಾಮ ಈ ರೀತಿಯಾಗಿದೆ. ಕಾನೂನು ಸಲಹೆಗಾರ ಸರಿಯಾದ ಮಾಹಿತಿಯನ್ನ ಸಿಎಂಗೆ ನೀಡಿಲ್ಲ. ಪ್ರಾಸಿಕ್ಯೂಷನ್ ಗೆ ಅನುಮತಿ ಸಿಗುತ್ತೆ ಅಂತ ಗೊತ್ತಿತ್ತು. ನಮಗೆ ನ್ಯಾಯ ಸಿಕ್ಕಿದೆ. ಯಾವ ರೀತಿ ತಪು?ಪ ಮಾಡಿದ್ರಿ ಅಂತ ದಾಖಲೆ ಕೊಟ್ಟಿದ್ವಿ. ಅವರು ಯಾವ ರೀತಿ ತಪ್ಪೆಸಗಿದ್ದಾರೆ ಎಂದು ದಾಖಲೆ ಇದೆ. ನಗರಾಭಿವೃದ್ಧಿ ಸಚಿವರು ಹೆಲಿಕಾಪ್ಟರ್ ಮೂಲಕ ಬಂದು ದಾಖಲೆ ಹೊತ್ತೊಯ್ದರು.
ಆದರೆ ಸಿಎಂ ಎಲ್ಲಾ ದಾಖಲೆ ಸರಿಯಾಗಿದೆ ಎಂದು ಹೇಳಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಬೇಕಾದರೇ ಸಾಕಷ್ಟು ಬಾರಿ ದಾಖಲೆ ಪರಿಶೀಲನೆ ನಡೆಸಿಯೇ ಆರೋಪ ಮಾಡಿದ್ದು. ಎಲ್ಲಾ ದಾಖಲೆಗಳು ಸಿಎಂ ವಿರುದ್ಧವಾಗಿದೆ. ಸಿಎಂ ಎಲ್ಲಾ ದಾಖಲೆ ಓದಿದ್ರೆ ಅವತ್ತೆ ಎಲ್ಲಾ ಸೈಟ್ ವಾಪಸ್ಸು ಕೊಡಬಹುದಿತ್ತು. ಸಿಎಂ ದಾಖಲೆಯನ್ನು ಓದದೆ ತಪುಪ ಮಾಡಿಲ್ಲಾ ಅಂತ ಹೇಳಿದ್ರು.
ಭೂಮಿ ತಾಯಿಗೆ ಮೈಸೂರಿನಲ್ಲಿ ಅಪಚಾರ ಮಾಡಿದ್ದಾರೆ. ಬಿಜೆಪಿಯವರು ತಪು?ಪ ಮಾಡಿದ್ದಾರೆ ಅಂದ್ರೆ ತನಿಖೆ ಮಾಡಬಹುದಿತ್ತಲ್ಲ. ಆದರೆ ಮಾಡಲಿಲ್ಲ. ಹಾಗಾಗಿ ಕೂಡಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಬಿಜೆಪಿಯ ಹಿರಿಯ ಧುರಿಣ ಎಲ್ ಕೆ ಅಡ್ವಾಣಿ ಅವರ ಹೆಸರು ಡೈರಿಯಲ್ಲಿ ಎಲ್ ಕೆ ಎ ಎಂದು ಇತ್ತು ಎಂಬ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ, ಹಾಗಾಗಿ ಆ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯನವರಿಂದ ರಾಜೀನಾಮೆ ಪಡೆಯುತ್ತದೆ. ಸಿಎಂ ವಿರುದ್ದ ಹೋರಾಟಕ್ಕೆ ನನಗೆ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ. ಮುಖ್ಯಮಂತ್ರಿ ಸರ್ಕಾರ ನಡೆದುಕೊಳ್ಳುತ್ತದೆ ಎಂದು ನೋಡಿಕೊಂಡು ಮುಂದಿನ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಪ್ರಧಾನಕಾರ್ಯದರ್ಶಿ ರಘು, ವಕ್ತಾರ ಮೋಹನ್, ಸಹ ವಕ್ತಾರ ಪ್ರದೀಪ್‍ಕುಮಾರ್, ಉಪಾಧ್ಯಕ್ಷ ಜೋಗಿ ಮಂಜು, ಒಬಿಸಿ ಮೋರ್ಚಾದ ಅಧ್ಯಕ್ಷ ಆರ್.ರಘು ಕೌಟಿಲ್ಯ ಮತ್ತಿತರರು ಉಪಸ್ಥಿತರಿದ್ದರು.