ಸತ್ಯ ಶೋಧನಾ ಸಮಿತಿ ಸಭೆ
ವಿಜಯಪುರ:ಆ ೧೮: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ೨೦೨೪ ರ ಲೋಕಸಭಾ ಚುನಾವಣೆಯ ಕುರಿತು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ. ಕೆ. ಶಿವಕುಮಾರರವರ ಆದೇಶದಂತೆ ನೇಮಕಾತಿ ಮಾಡಿದ “ಸತ್ಯ ಶೋಧನಾ ಸಮಿತಿ” ಅಧ್ಯಕ್ಷ ಮಾಜಿ ಸಚಿವ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ. ಎಸ್. ನಾಡಗೌಡ, ಸಮಿತಿ ಸದಸ್ಯರುಗಳಾದ ಮಾಜಿ ಸಚಿವರಾದ ಬಿ. ಟಿ. ಪರಮೇಶ್ವರ ನಾಯಕ, ಮಾಜಿ ಶಾಸಕ ಮಕ್ಬೂಲ ಬಾಗವಾನ, ಮಾಜಿ ವಿಧಾನಪರಿಷತ್ ಸದಸ್ಯಡೇವಿಡ್ ಸಾಮಿಯುನ್, ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಮಲ್ಲಿಕಾರ್ಜುನ ಹಕ್ಕಿ ರವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿಯವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ವಿಜಯಪುರ ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕೆ.ಪಿ.ಸಿ.ಸಿ. ಪದಾಧಿಕಾರಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಜೊತೆಗೆ ಸತ್ಯ ಶೋಧನಾ ಸಮಿತಿಯಿಂದ ಸಭೆ ನಡೆಸಲಾಯಿತು.
ಈ ವೇಳೆ ಎಲ್ಲ ಬ್ಲಾಕ್ ಅಧ್ಯಕ್ಷರುಗಳ ಹಾಗೂ ಎಲ್ಲ ಮುಖಂಡರುಗಳ ಜೊತೆ ಚರ್ಚಿಸಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣಗಳನ್ನು ಸಂಗ್ರಹ ಮಾಡಿದರು ಹಾಗೂ ಮುಂಬರುವ ಸಂದರ್ಭದಲ್ಲಿ ಪಕ್ಷದ ಸಂಘಟನೆಯ ಕುರಿತು ಹಾಗೂ ಹಲವು ವಿಷಯಗಳ ಕುರಿತು ಮಾತನಾಡಿ ಮಾರ್ಗದರ್ಶನ ನೀಡಿದರು.