ಮಹಾಬೋಧಿ ಶಾಲಾ ಶಿಕ್ಷಕರಿಗೆ ಕನ್ನಡ ಸ್ವಾಭಿಮಾನ ಸ್ಮಾರಕ ಪ್ರಶಸ್ತಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.18: ಶ್ರೀಮತಿ. ಮೈಸೂರಿನ ಸರಸ್ವತಿಪುರದ ಮಹಾಬೋಧಿ ಶಾಲೆಯ ಶಿಕ್ಷಕಿ ಸುಜಯ ಅವರಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾರಾಮಂಡಲ ಸಂಸ್ಥೆಯ ವತಿಯಿಂದ `ಕನ್ನಡ ಸ್ವಾಭಿಮಾನ ಸ್ಮಾರಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2023-24 ನೇ ಸಾಲಿನ ಕನ್ನಡ ಪ್ರತಿಭಾ ಪರೀಕ್ಷೆಯನ್ನು ನಡೆಸುವಲ್ಲಿ ಅವರ ಅತ್ಯುತ್ತಮ ಸಾಧನೆ ಮತ್ತು ಯಶಸ್ಸಿಗಾಗಿ ಈ ಮನ್ನಣೆಯನ್ನು ನೀಡಲಾಗಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಈ ಗೌರವ ಪಡೆದ ನಮ್ಮ ಶಾಲೆ ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆ ನಮ್ಮದು.