ಅಧ್ಯಾತ್ಮಿಕ ಲೋಕದ ಚಿಂತಕರು ಅಲ್ಲಮಪ್ರಭು : ಚಿಮಕೋಡೆ
(ಸಂಜೆವಾಣಿ ವಾರ್ತೆ )
ಔರಾದ್.ಆ.೧೮ : ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರಾದ ಅಲ್ಲಮಪ್ರಭುಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಅಲ್ಲಮಪ್ರಭು ಅಧ್ಯಾತ್ಮಿಕ ಲೋಕದ ಚಿಂತಕರು ಎಂದು ಬೀದರನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕರಾದ ಸುವರ್ಣಾ ಚಿಮಕೋಡೆ ಹೇಳಿದರು.
ಪಟ್ಟಣದ ಅನುಭವ ಮಂಟಪದಲ್ಲಿ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡ ಬಸವತತ್ವ ದರ್ಶನ ವಿಷಯದ ಮೇಲೆ ಪ್ರವಚನದಲ್ಲಿ ಮಾತನಾಡಿದ ಅವರು ಅಲ್ಲಮಪ್ರಭು ದೇವರು ೧೨ನೇ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ನೇರ ನಿಷ್ಠುರವಾದಿ. ಅನೇಕ ಶಿವಶರಣರ, ಶಿವಶರಣಿಯರಿಗೆ ಭಕ್ತಿ-ವೈರಾಗ್ಯವನ್ನು ಭೋಧಿಸಿದವರು. ತನ್ನ ವಚನಗಳ ಮೂಲಕ ಅಂತರAಗ, ಬಹಿರಂಗಗಳನ್ನು ಶೋಧಿಸಲೆತ್ತಿಸಿದರು ಎಂದರು. ಶಿವಶರಣರಲ್ಲಿ ಅಲ್ಲಮಪ್ರಭುಗಳು ಪ್ರಮುಖರು. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವ ಮಂಟಪ ಶೂನ್ಯ ಪೀಠದ ಅಧ್ಯಕ್ಷರಾಗಿದ್ದರು. ಬಸವಣ್ಣನವರ ಸಮಕಾಲೀನನಾದ ಇವರು, ತಮ್ಮ ವಚನಗಳಲ್ಲಿ ಗಹನವಾದ ಅಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದರು.
೧೨ನೇ ಶತಮಾನದ ಶರಣರೂ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯ ನೀಡಿದ್ದಾರೆ. ಸ್ತ್ರೀಯರಿಗೆ ಸಮಾನತೆ ದೊರಕಲು ೧೨ನೇ ಶತಮಾನದವರೆಗೆ ಕಾಯಬೇಕಾಯಿತು. ೧೨ನೇ ಶತಮಾನವನ್ನು ಸೂರ್ಯ, ಚಂದ್ರರಿರುವವರೆಗೂ ನೆನಪು ಮಾಡಿಕೊಳ್ಳುವಂತೆ ಮಾಡಿದವರು ಶರಣರು ಎಂದು ತಿಳಿಸಿದರು.ಅನೇಕರು ಶರಣರ ಬಗ್ಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಆದರೆ ಶರಣರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವ ಅಗತ್ಯವದೆ ಎಂದರು.
ನಿವೃತ್ತ ಪ್ರೋ. ಕಾರ್ತಿಕ ಸ್ವಾಮಿ ಅವರು ದಾಸೋಹ ವ್ಯವಸ್ಥೆ ಮಾಡಿದರು. ಪ್ರಮುಖರಾದ ಪ್ರಕಾಶ ಘೂಳೆ, ಡಾ. ಧನರಾಜ ರಾಗಾ, ಚಂದ್ರಕಾAತ ಘೂಳೆ, ಮನ್ಮಥಪ್ಪ ಬಿರಾದಾರ್, ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಕಲ್ಯಾಣರಾವ ಶೆಂಬೆಳ್ಳಿ, ಅಮೃತರಾವ ಬಿರಾದಾರ್, ವಿದ್ಯಾವತಿ ಎಡವೆ ಸೇರಿದಂತೆ ಅನೇಕರಿದ್ದರು.