ಮೇಘಲಯ ರಾಜ್ಯಪಾಲರು ಸಿ.ಎಚ್ ವಿಜಯ್ ಶಂಕರ್ ರವರಿಂದ 5 ದಿನಗಳ ಕಾಲ ಮೈಸೂರು ಪ್ರವಾಸ
ಸಂಜೆವಾಣಿ ನ್ಯೂಸ್
ಮೈಸೂರು: ಆ.18: ಆಗಸ್ಟ್ 19, 2024 ಸೋಮವಾರ ಬೆಳಗ್ಗೆ 10 ಗಂಟೆಗೆ ಶಿಲ್ಲಾಂಗ್ ನ ನಾಂಗ್‍ಪೆÇೀದಿಂದ ಗುವಾಹಟಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಗುವಾಹಟಿ ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜ್ಯ ಅತಿಥಿ ಗೃಹಕ್ಕೆ ಆಗಮಿಸಲಿರುವ ಗೌರವಾನ್ವಿತ ರಾಜ್ಯಪಾಲರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
20ನೇ ಆಗಸ್ಟ್, 2024ರಂದು ಬೆಳಗ್ಗೆ ಕುಂಬಳಗೋಡು ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ನಂತರ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
ನಂತರ ರಾಜ್ಯಪಾಲರು ಕೇಶವಕೃಪಾಗೆ ಭೇಟಿ ನೀಡಲಿದ್ದಾರೆ. ನಂತರ ಕೇಶವಕೃಪಾದಿಂದ ರಾಜ್ಯಪಾಲರು ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿಯೇ ತಂಗಲಿದ್ದಾರೆ.
21ರ ಆಗಸ್ಟ್ 2024ರಂದು, ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸಿ.ಎಚ್. ವಿಜಯಶಂಕರ್ ಅವರು ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನಂತರ ಮೈಸೂರಿನ ವಿಜಯನಗರಲ್ಲಿ ಅರ್ಕಧಾಮ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮೈಸೂರಿನ ಮುಡಾ ಕಚೇರಿ ಎದುರಿನ, ಜೆಎಲ್. ಬೋರ್ಡ್ ರೋಟರಿ ಶಾಲೆಯಲ್ಲಿ ನಡೆಯಲಿರುವ “ನಾಗರಿಕ ಸನ್ಮಾನ” ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
22, ಆಗಸ್ಟ್ 2024ರಂದು ಬೆಳಗ್ಗೆ ಬಿಳಿಕೆರೆ ಹೋಬಳಿಯಲ್ಲಿರುವ ಕೆಂಡಗಣ್ಣೇಶ್ವರ ಸ್ವಾಮಿ ದೇಗುಲ ಗದ್ದಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ಹುಣಸೂರಿನಲ್ಲಿರುವ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.
ನಂತರ ಹುಣಸೂರಿನ ಕಾಲುಕುಣಿಕೆ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.
23, ಆಗಸ್ಟ್, 2024ರಂದು ಬೆಳಗ್ಗೆ ಟಿ. ನರಸೀಪುರದ ತ್ರಿಪುರಾಸುಂದರಿ ಅಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
24, ಆಗಸ್ಟ್, 2024ರಂದು ಬೆಳಗ್ಗೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸಿ.ಎಚ್. ವಿಜಯಶಂಕರ್ ಅವರಿಗೆ ನಾಗರಿಕ ಸನ್ಮಾನ ಆಯೋಜಿಸಲಾಗಿದೆ.
25, ಆಗಸ್ಟ್, 2024ರಂದು ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 109ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಮೈಸೂರಿನಲ್ಲಿರುವ ನಿವೃತ್ತ ಉಪ ಕುಲಪತಿಗಳಾದ ಶ್ರೀ ಶಶಿಧರ್ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
26 ಆಗಸ್ಟ್, 2024ರಂದು ಬೆಳಗ್ಗೆ ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಭೂವರಾಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
27, ಆಗಸ್ಟ್, 2024ರಂದು ಬೆಳಗ್ಗೆ ಮೈಸೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಗುವಾಹಟಿಗೆ ಪ್ರಯಾಣ ಬೆಳೆಸಲಿದ್ದಾರೆ. ನಂತರ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. 28 ಆಗಸ್ಟ್, 2024ರಂದು ಬೆಳಗ್ಗೆ ಅಸ್ಸಾಂನ ಖಾನಾಪುರದ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಗೌರವಾನ್ವಿತ ರಾಜ್ಯಪಾಲರು. ನಂತರ ಕಾಮಾಕ್ಯ ದೇಗುಲದಿಂದ ಶಿಲ್ಲಾಂಗ್‍ನ ನಾಂಗ್‍ಪೆÇೀಗೆ ತೆರಳಲಿದ್ದಾರೆ.
ಅಲ್ಲಿಂದ ಶಿಲ್ಲಾಂಗ್‍ನ ರಾಜಭವನಕ್ಕೆ ಘನತೆವೆತ್ತ ರಾಜ್ಯಪಾಲರಾದ ಶ್ರೀ ಸಿ.ಎಚ್. ವಿಜಯಶಂಕರ್ ತೆರಳಲಿದ್ದಾರೆ.ಮೇಘಾಲಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ. ಸಿ.ಎಚ್. ವಿಜಯಶಂಕರ್ ಅವರ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಜಿ.ಜಿ. ರಾಜು 86184 19857 ಅವರು ಸೇರಿದಂತೆ ಹಲವರು ರಾಜ್ಯಪಾಲರ ಜೊತೆ ಇರಲಿದ್ದಾರೆ.