ಹರಾಜು ಪ್ರಕ್ರಿಯೆ ನಡೆಸದೆ ಅಂಗಡಿಗಳು ವಿತರಣೆ ಆರೋಪ
ಸೇಡಂ, ಅ,01: ತಾಲೂಕಿನ ಮಳಖೇಡ ಬಸ್ ನಿಲ್ದಾಣ ದಲ್ಲಿರುವ ಎಲ್ಲಾ ಅಂಗಡಿಗಳನ್ನು ಯಾವುದೇ ರೀತಿಯ ಹರಾಜು ಪ್ರಕ್ರಿಯೆ ನಡೆಸದೆ ಸೇಡಂ ಸಾರಿಗೆ ಸಂಸ್ತೆಯ ಅಧಿಕಾರಿಗಳು ಸಂಪೂರ್ಣವಾಗಿ ಇದರಲ್ಲಿ ಶಾಮಿಲಾಗಿದ್ದು ಇದರ ಬಗ್ಗೆ ಕುಲಂಕುಶವಾಗಿ ವಿಚಾರಣೆ ನಡಿಸಬೇಕು ಹಾಗೂ ವಾಮ ಮಾರ್ಗದಿಂದ ಒಬ್ಬರ ಹೆಸರಿನಲ್ಲಿಯೆ ಅಂಗಡಿಗಳನ್ನು ನೀಡಿದ್ದು ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದು ಇದರ ಬಗ್ಗೆ ಮೇಲಾಧಿಕಾರಿಗಳು ಕಟ್ಟುನಿಟ್ಟಾದ ಕ್ರಮ ಜರುಗಿಸಿ,ಕೆಲವೇ ತಿಂಗಳಲ್ಲಿ ಜನರಿಗೆ ಯಾವುದೆ ರೀತಿಯ ಸೂಚನೆ ನೀಡಿದೆ ಮಾಡಿರುವ ಹರಾಜು ಪ್ರಕ್ರಿಯೆ ರದ್ದುಗೂಳಿಸಿ ಮತ್ತೂಮ್ಮೆ ಜನರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯರ ನಡೆಸಬೇಕೆಂದು ಸಾಮಾಜಿಕ ಹೋರಾಟಗಾರ ಶಿವರಾಜ ವಿಶ್ವಕರ್ಮ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.