ಸಮುದಾಯದ ಅಭಿವೃದ್ದಿಯಲ್ಲಿ ಯುವಜನರ ಪಾತ್ರ ತುಂಬಾ ಮುಖ್ಯ: ಡಾ. ಅಂತೋನಿ
ವಿಜಯಪುರ,ಅ.1: ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಜೀವನಜ್ಯೋತಿ ಮಾಜಿ ದೇವದಾಸಿ ತಾಯಂದಿರ ವಿಜಯಪುರ ಜಿಲ್ಲಾ ಒಕ್ಕೂಟ ಇವರ ಸಹಯೋಗದಲ್ಲಿ, ಆಶಾಕಿರಣ ಯುವಜನರಿಗೆ ಸಾಮಾಜಿಕ ವಿಶ್ಲೇಷಣೆ ಕುರಿತು ಎರಡು ದಿನದ ತರಬೇತಿ ಕಾರ್ಯಗಾರವು ನಗರದ ಲೊಯೋಲಾ ಪಿ. ಯು. ಕಾಲೇಜು ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಮು
ಧೋಳ ಅಂತೋದಯ ಸಂಸ್ಥೆ ಮುಖ್ಯಸ್ಥ ಡಾ. ಅಂತೋನಿ ಸಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹು ಮುಖ್ಯವಾದ್ದುದು. ಅವರು ಮನಸು ಮಾಡಿದರೆ ದೇಶವನ್ನೆ ಆಳಬಲ್ಲರು. ಆದರೆ ಈಗಿನ ಯುವಕರು ತಮ್ಮ ಯೌವನಾವಸ್ಥೆಯಲ್ಲಿ ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಮಾಜದಲ್ಲಿ ನಡೆಯುವ ತಾರತಮ್ಯ, ಜಾತಿ ಭೇದ, ಹಾಗೂ ಸಮಾನತೆಯ ವ್ಯವಸ್ಥೆಯ ವಿರುದ್ದ ಹೋರಾಡಲು ಅವರು ಮುಂದಾಗದೇ ಮೌನ ವಹಿಸುತ್ತಿದ್ದಾರೆ. ಇದು ಆಘಾತಕಾರಿ ವಿಷಯವಾಗಿದೆ. ಸಮಾಜದ ಒಂದು ಮುಖ್ಯ ವ್ಯವಸ್ಥೆಯ ಬಗ್ಗೆ ಯುವಕರು ತಿಳಿದುಕೊಳ್ಳಬೇಕು. ಸಂಘಟಿತರಾಗಬೆಕು ಸಂವಿಧಾನ ಬದ್ಧ ಬದುಕು ಸಾಗಿಸಲು ನಾವು ಮುಂದಾಗಬೇಕು ಎಂದು ಕರೆ ನಿಡಿದರು.
ಕುಷ್ಟಗಿಯ ವಿಮುಕ್ತ ದೇವದಾಸಿ ತಾಯಂದಿರ ವೇದಿಕೆ ಸಂಚಾಲಕ ಚಂದಲಿಂಗ ಕಲಾಲಬಂಡಿ ಅವರು ಮಾತನಾಡಿ, ಯುವಕರು ಸಮಾಜದಲ್ಲಿ ಬದಲಾಣೆ ಮಾಡುವುದಾದರೆ. ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ಸಮುದಾಯದಲ್ಲಿ ಅಥವಾ ಸಮಾಜದಲ್ಲಿ ಗಣನೀಯವಾದ ಪರಿವರ್ತನೆ ಅತಿ ಶಘ್ರದಲ್ಲಿ ಕಾಣಲು ಸಾದ್ಯವಾಗಿದೆ. ಅದಕ್ಕೆ ಇಂತ ಅರ್ಥಪೂರ್ಣವಾದ ತರಬೇತಿಗಳಲ್ಲಿ ಭಾಗಿಯಾಗಬೇಕೆಂದು ಯುವ ಫೀಳಿಗೆಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರೇಣುಕಾ ಎಂಟಮಾನ ಅವರು ಮಾತನಾಡಿದರು. ಫಾದರ್ ಟಿಯೋಲ್ ಮಚಾದೋ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನಸೂಯಾ ಮಾಶ್ಯಾಳ ಸ್ವಾಗತಿಸಿದರು ರೇಷ್ಮಾ ಕಟ್ಟಿಮನಿ ನಿರೂಪಿಸಿದರು. ಸುನೀತಾ ಮೋರೆ ವಂದಿಸಿದರು.