ಪಗಡಿ ಪಂದ್ಯಾವಳಿ: ಗಣಿ ತಂಡ ಪ್ರಥಮ
ವಿಜಯಪುರ,ಅ.1:ದಸರಾ ಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಪಗಡಿ ಪಂದ್ಯಾವಳಿಯನ್ನು ಇವಣಗಿ ಗ್ರಾಮದ ಲಕ್ಕಮ್ಮತಾಯಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಪ್ರಥಮ ಸ್ಥಾನ ಗಣಿ ಗ್ರಾಮದ ತಂಡ ಬಹುಮಾನ ಪಡೆಯಿತು. ದ್ವಿತೀಯ ಸ್ಥಾನ ನಾಗೂರ ಗ್ರಾಮದ ತಂಡ ಪಡೆಯಿತು. ತೃತೀಯ ಸ್ಥಾನ ಅಡವಿ ಸೋಮನಾಳ ತಂಡ ಪಡೆಯಿತು. ನಾಲ್ಕನೆ ಸ್ಥಾನ ನಾವಲಗಿ ಗ್ರಾಮದ ತಂಡ ಪಡೆಯಿತು. ಐದನೇ ಸ್ಥಾನ ಇವಣಗಿ ಗ್ರಾಮದ ತಂಡ ಪಡೆಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಗ್ರಾಮಗಳಿಂದ 60 ತಂಡಗಳು ಭಾಗವಹಿಸಿದ್ದವು.
ಸಿದ್ದಪ್ಪ ಅವಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಮಗ್ರ ಆಟದ ಕಮೀಟಿಯ ಜವಾಬ್ದಾರಿಯನ್ನು ಮಂಜುನಾಥ ಇಟಗಿ, ಉಮೇಶ ರೂಡಗಿ, ಸುರೇಶ ಚಿಗರಿ, ಪೆÇೀಸ್ಟ ಮಾಸ್ಟರ ಹಡಪದ, ಬಸವರಾಜ ಕಳ್ಳಿಗುಡ್ಡ, ಸಿದ್ದಪ್ಪ ಕಣಮುಚನಾಳ ಹಾಗೂ ಶಿವರಾಯ ದಳವಾಯಿ ಅವರು ವಹಿಸಿದ್ದರು.