ಹಸಿದ ಹೊಟ್ಟೆಗೆ ಅನ್ನ ಹಾಕುವ ಸಾಮಥ್ರ್ಯ ರೈತನಿಗಿದೆ: ಅಲ್ಲಮಪ್ರಭು ಪಾಟೀಲ
ಕಲಬುರಗಿ:ಅ.1:ರೈತ ದೇಶದ ಬೆನ್ನೆಲುಬು ಹಸಿದ ಹೊಟ್ಟೆಗೆ ಅನ್ನ ಹಾಕುವಂತಹ ಸಾಮಥ್ರ್ಯ ಯಾರಿಗಾದರೂ ಇದೆ ಎಂದರೆ ರೈತನಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿ ರೈತನ ಪರಿಸ್ಥಿತಿ ಅಷ್ಟೊಂದು ಶೋಚನೀಯವಾಗಿಲ್ಲ, ಏಕೆಂದರೆ ಅವನು ಬೆಳೆದಿರುವ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದರಿಂದ ಅವರ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ರೈತರಿಗೆ ಹೆಚ್ಚಿನ ಬೆಂಬಲ ಸಿಗಬೇಕು, ದೆಹಲಿಯಲ್ಲಿ ನಡೆದಂತಹ ರೈತ ಚಳುವಳಿಯಲ್ಲಿ ಎಷ್ಟು ರೈತ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗೆ ರೈತರ ಆತ್ಮಹತ್ಯೆ ಪ್ರಕರಣಗಳು ಸಹ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಯಾವುದೇ ಸರ್ಕಾರವಿರಲಿ ರೈತರಿಗೆ ಪೆÇ್ರೀತ್ಸಾಹಿಸಬೇಕು, ರೈತರಿಗೆ ಹೆಚ್ಚಿನ ಬೆಂಬಲ ಬೆಲೆ ನೀಡಿ ಅವರಿಗೆ ಸೌಲಭ್ಯಗಳನ್ನು ಸಹ ನೀಡಿ ಅವರ ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕು ಆಗ ಮಾತ್ರ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿ ಅವರ ಜೀವನವು ಉತ್ತಮರೀತಿಯಾಗಿರಲು ಸಹಕಾರಿಯಾಗುತ್ತದೆ. ರೈತರ ಜೊತೆಗೆ ನಮ್ಮ ಪಕ್ಷ ಯಾವಾಗಲೂ ಬೆಂಬಲ ಇರುತ್ತದೆ ಎಂದು ದಕ್ಷಿಣ ಮತಕ್ಷೇತ್ರ ಕಲಬುರಗಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಅವರು ನಗರದ ಎಸ್. ಎಂ.ಪಂಡಿತ್ ರಂಗಮಂದಿರದಲ್ಲಿ ಹಾಯ್ ಪಾಯಿಂಟ್ ಕರ್ನಾಟಕ ಮಾಸ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ 101 ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ. ಶಿಕ್ಷಕರಿಗೆ ಕಲಾವಿದರಿಗೆ, ವೈದ್ಯರಿಗೆ, ಪೆÇಲೀಸರಿಗೆ ಹೀಗೆ ಹಲವರಿಗೆ ಕರ್ನಾಟಕ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡುತ್ತಿದ್ದರು, ಸಾವಳಗಿ ಗುರುನಾಥ್ ಮಹಾಸ್ವಾಮಿಗಳು, ಕೋಲಾರದ ಶಿವ ಶರಣೆ ವಿದ್ಯಾ ಜ್ಞಾನೇಶ್ವರಿಯವರು ಸಾನಿಧ್ಯ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಭೀಮಾಶಂಕರ ಹೊನ್ನಿಕೇರಿ. ತಿಪ್ಪಣ್ಣ ಒಡೆಯರ್. ಬಾಬುರಾವ್ ಕೋಬಾಳ್. ಲಿಂಗಣ್ಣ ಸಾಗರೆ. ಭೀಮಶಂಕರ್ ಬಂಕುರ್ ಆನಂದ್ ಸಿನ್ನೂರ್. ಲಕ್ಷ್ಮರೆಡ್ಡಿ ಕಲಬುರ್ಗಿ. ಆನಂದ ವಠಾರ ಸಂಪಾದಕ ಮೋಹನ್ ಪಾಟೀಲ್ ಉಪಸ್ಥಿತರಿದ್ದರು. ಅವಣ್ಣಗೌಡ ಪಾಟೀಲ್ ಸರ್ವರನ್ನು ಸ್ವಾಗತಿಸಿದರು ನಾಗೇಶ್ವರಿ ಕದಮ್ ನಿರೂಪಿಸಿದರು.