ರೈತ ಭವನ ಕಾಮಗಾರಿಗೆ ಅಡಿಗಲ್ಲು
ಕಲಬುರಗಿ: ಅ.1:ಉದನೂರ ಗ್ರಾಮದಲ್ಲಿರುವ ಜೋಡ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ರೈತ ಭವನ ಕಾಮಗಾರಿ ಅಡಿಗಲ್ಲು ಸಮಾರಂಭವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಇ.ಇ ಸತ್ಯಪ್ರಕಾಶ್ ಮೂಲಗೆ, ಅಮೃತ್ ಪವಾರ್, ಎ.ಇ.ಇ ವಿನಾಯಕ, ಎಇ ನವನೀತ್, ನಂದಿಕೂರ ಗ್ರಾ.ಪಂ.ಅಧ್ಯಕ್ಷ ಚಂದ್ರಕಾಂತ್ ಸೀತನೂರ, ಪಿಡಿಒ ಸಂದೀಪ ಗುತ್ತೇದಾರ್, ಗುತ್ತಿಗೆದಾರ ಹನಮಂತರಾಯ ಬಿರಾದಾರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ, ಮುಖಂಡರಾದ ಶಿವಕುಮಾರ್ ಬಾಳ್ಳಿ, ಲಕ್ಷ್ಮೀಣ ಪೂಜಾರಿ, ಶಿವಲಿಂಗಯ್ಯ ಮಠಪತಿ, ಬಲಬಿಮ ಬಿರಾದಾರ, ಶಿವಪುತ್ರ ಮಾಲಿಪಾಟೀಲ್, ರಾಜಕುಮಾರ ಬಿರಾದಾರ, ಶಾಂತಕುಮಾರ ಬಿರಾದಾರ, ರವಿರಾಜ ಪಾಟೀಲ್, ಹಣಮಂತರಾಯ ಕಪನೂರ, ಮಲ್ಲಿನಾಥ ಬಿರಾದಾರ, ಶರಣಬಸಪ್ಪ ಮಾಲಿಪಾಟೀಲ್, ಶುಭಾಷಚಂದ್ರ ಮೂಲಗೆ, ಹಜರತ್ ಸಾಬ್, ಮಹಾಂತೇಶ್ ಪಾಟೀಲ್, ವಿಠ್ಠಲ್ ಚವ್ಹಾಣ, ಅಮಿತ್ ಉದನೂರ, ಗುಂಡು ಪೂಜಾರಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಗ್ರಾಮಸ್ತರು ಭಾಗವಹಿಸಿದರು.