ರಾಷ್ಟ್ರಧ್ವಜಕ್ಕೆ ಅಗೌರವ ಹವಾಲ್‌ದ್ದಾರ್ ಅಮಾನತಿಗೆ ಆಗ್ರಹ
ಆನೇಕಲ್.ಆ೧೮:ಜಿಗಣಿಯಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಘಟಕ- ೨೭ ರಲ್ಲಿ ಆಗಸ್ಟ್ ೧೫ ರಂದು ನಡೆದ ೭೮ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಗಣಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಘಟಕ- ೨೭ರಲ್ಲಿ ಕೆಲಸ ನಿರ್ವಹಿಸುತ್ತಿರುವ ಹವಾಲ್ ದ್ದಾರ್ ಪುಟ್ಟರಾಜು ಎಂಬ ವ್ಯಕ್ತಿ ರಾಷ್ಠ ಧ್ವಜಕ್ಕೆ ಅ-ಗೌರವ ತೋರಿದ್ದಾರೆ ಎಂದು ಆರೋಪಿಸಿ ಇಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಪ್ರಜ್ವಲ್ ಜಿಗಣಿ ಶಂಕರ್ ರವರ ನೇತೃತ್ವದಲ್ಲಿ ಬಿಎಂಟಿಸಿ ಡಿಪೋ ಮುಂಭಾಗ ಮುಂಬಾಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೂಡಲೇ ಪುಟ್ಟರಾಜು ನನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಡಿಪೋ ಮ್ಯಾನೇಜರ್ ರಮೇಶ್ ಎಂಬುವರಿಗೆ ಮನವಿ ಪತ್ರ ನೀಡಿದರು. ಹಾಗೆಯೇ ಜಿಗಣಿ ಪೋಲಿಸ್ ಠಾಣೆಗೆ ಬೇಟಿ ನೀಡಿ ಪುಟ್ಟರಾಜು ವಿರುದ್ದ ದೂರು ದಾಖಲಿಸುವಂತೆ ಪೋಲಿಸರಿಗೆ ಮನವಿ ಪತ್ರವನ್ನು ನೀಡಿದರು.
ಸ್ಥಳದಲ್ಲಿ ಹೋರಾಟಗಾರರಾದ ಕಲ್ಲುಬಾಳು ನರೇಂದ್ರ ಕುಮಾರ್. ಡಿಚ್ಚಿ ರಾಜಣ್ಣ. ನಾಗರಾಜ್ ಮೌರ್ಯ, ಪ್ಯಾನ್ಸಿ ರಮೇಶ್. ರುದ್ರಪ್ಪ, ಯಲಚೇನಹಳ್ಳಿ ಮುನಿರಾಜು. ಕೊಪ್ಪ ಕುಮಾರ್, ಹುಲ್ಲಳ್ಳಿ ಮರಿಯಪ್ಪ. ದೊಡ್ಡಹಾಗಡೆ ಯಲ್ಲಪ್ಪ, ಕೂಡ್ಲು ಜಯರಾಮ್, ಆನೇಕಲ್ ಸಲೀಂ. ನರಸಿಂಹಣ್ಣ ಹಾಜರಿದ್ದರು.
