ಎಚ್.ಪಿ.ಸಿ.ಎಲ್. ನಂದೂರಿನಲ್ಲಿ ಬೆಂಕಿ ಆಹುತಿಯ ಆಫ್‌ಸೈಟ್ ಅಣಕು ಪ್ರದರ್ಶನ
ಕಲಬುರಗಿ,ಆ.೧೮:ಕಲಬುರಗಿ-ಶಹಾಬಾದ ರಸ್ತೆಯಲ್ಲಿರುವ ನಂದೂರು ಕೈಗಾರಿಕಾ ಪ್ರದೇಶದಲ್ಲಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ರಾಸಾಯಿನಿಕ ವಿಪತ್ತು ನಿರ್ವಹಣೆ ಅಂಗವಾಗಿ ಅತಿ ಅಪಾಯಕಾರಿ ಕಾರ್ಖಾನೆಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಗಟ್ಟುವ ಸಂಬAಧ ಕಾರ್ಮಿಕರಿಗೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಪಾಯಗಳ ಕುರಿತು ಅರಿವು ಮೂಡಿಸಲು ಶನಿವಾರ ಅಫ್-ಸೈಟ್ ಅಣುಕು ಪ್ರದರ್ಶನ ನಡೆಯಿತು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಹಾಗೂ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥö್ಯ ಇಲಾಖೆ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್ ಸಹಯೋಗದೊಂದಿಗೆ ನಡೆದ ಈ ಅಣಕು ಪ್ರದರ್ಶನದಲ್ಲಿ ನಂದೂರು ಎಚ್.ಪಿ.ಸಿ.ಎಲ್ ಡಿಪೋನಲ್ಲಿ ೩,೨೦೦ ಕಿ.ಲೋ. ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕಿಗೆ ಸಿಡಿಲು ಬಡಿದು ಬೆಂಕಿ ಆಹುತಿಯಾಗಿದೆ ಎಂದು ಕಲ್ಪಿಸಿಕೊಂಡು ರಕ್ಷಣಾ ಕಾರ್ಯಚರಣೆ ನಡೆಸಲಾಯಿತು.
ಅಣಕು ರಕ್ಷಣಾ ಕಾರ್ಯಚರಣೆಯ ನೋಟ: ಹೆಚ್.ಪಿ.ಸಿ.ಲ್ ಕಾರ್ಖಾನೆ ಆಡಳಿತ ವರ್ಗ ಸಿಡಿಲಿನಿಂದ ಟ್ಯಾಂಕಿಗೆ ಹತ್ತಿದ ಬೆಂಕಿ ನಂದಿಸಲು ಸಾಧ್ಯವಾಗದಿದ್ದಾಗ ತಮ್ಮ ಸುತ್ತಮುತ್ತಲಿನ ಕಾರ್ಖಾನೆಗೆಳಿಗೆ ಅದರಿಂದ ಆಗಬಹುದಾದ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕೂಡಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದರು.
ಅಗ್ನಿ ದುರಂತ ಮಾಹಿತಿ ದೊರೆತ ಕೂಡಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಅವರು ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಕ್ಯಾಂಪ್ ತೆರೆದು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಅದರಂತೆ ಎ.ಸಿ. ರೂಪಿಂದರ್ ಸಿಂಗ್ ಕೌರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಗ್ನಿ ದುರಂತ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ನಿರ್ದೇಶನ ನೀಡಿದ್ದರಿಂದ ಎಸ್.ಡಿ.ಆರ್.ಎಫ್., ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಆರ್.ಟಿ.ಓ, ಆಹಾರ, ಆರೋಗ್ಯ, ಲೋಕೋಪಯೋಗಿ, ಪಶು ಸಂಗೋಪನಾ, ಕೆ.ಐ.ಎ.ಡಿ.ಬಿ., ಗ್ರಾಮೀಣ ಕುಡಿಯುವ ನೀರು, ಡಿ.ಐ.ಸಿ, ಆರ್.ಡಿ.ಪಿ.ಆರ್ ಹಾಗೂ ಪಿ.ಆರ್.ಓ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಖಾನೆಯ ಇನ್ಸಿಡೆಂಟ್ ಕಮಾಂಡರ್‌ನಿAದ ಪಡೆದು ರಕ್ಷಣಾ ಕಾರ್ಯಾಚರಣೆಗೆ ಇಳಿದರು. ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು.
ನಂತರ ನಡೆದ ಅಣುಕು ಪ್ರದರ್ಶನದ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಣಾ ಪಡೆಯು ಒಂದು ತಂಡ ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾದರೆ, ಇನ್ನೊಂದು ತಂಡ ಹೆಚ್.ಪಿ.ಸಿ.ಎಲ್. ಡಿಪೋ ಮತ್ತು ಸುತ್ತಮುತ್ತಲಿನ ಕಾರ್ಖಾನೆಯಲ್ಲಿರುವ ಕಾರ್ಮಿಕರನ್ನು ರಿಲೀಫ್ ಕ್ಯಾಂಪ್‌ಗೆ ಸ್ಥಳಾಂತರಿಸಿದರು. ಪೆಟ್ರೋಲ್ ಟ್ಯಾಂಕ್ ಸಂಪೂರ್ಣ ಬೆಂಕಿಯ ಆಹುತಿಗೆ ಒಳಗಾಗಿದ್ದ ಕಾರಣ ಟ್ಯಾಂಕ್ ಪಕ್ಕದಲ್ಲಿಯೇ ಇದ್ದ ಇಬ್ಬರು ಕಾರ್ಮಿಕರಿಗೆ ಬೆಂಕಿ ಆವರಿಸಿ ಸಾವನಪ್ಪಿದ್ದಂದ ಅವರ ದೇಹಗಳನ್ನು ಹೊರ ತೆಗೆಯಲಾಯಿತು. ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದರಿಂದ ಅವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಉಳಿದಂತೆ ಗಂಭೀರ ಗಾಯಾಳುಗಳಾಗಿದ್ದ ಐವರಲ್ಲಿ ಮೂವರನ್ನು ರಿಲೀಫ್ ಕ್ಯಾಂಪ್‌ಗೆ ತಂದು ಚಿಕಿತ್ಸೆ ನೀಡಿದರೆ, ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರಕ್ಷಣಾ ಪಡೆಗಳು ಕಾರ್ಯಾಚರಣೆ ಪಡೆಗಳು ಕಾರ್ಯಾಚರಣೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಆಫ್‌ಸೈಟ್ ಅಣಕು ಪ್ರದರ್ಶನದಲ್ಲಿ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥö್ಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಕೇಶ.ವಿ, ಡಿ.ಹೆಚ್.ಓ. ರತಿಕಾಂತ ಸ್ವಾಮಿ, ಹೆಚ್.ಪಿ.ಸಿ.ಎಲ್. ಚೀಫ್ ಡಿಪೋ ಮ್ಯಾನೇಜರ್ ವಿಪಿನ್ ತೋತಲಾ, ಎಸ್.ಡಿ.ಆರ್.ಎಫ್. ಇನ್ಸ್ಪೆಕ್ಟರ್ ಅಂಬ್ರೇಶ್ ಚವ್ಹಾಣ, ಅಗ್ನಿಶಾಮಕ ಠಾಣಾಧಿಕಾರಿ ಅಂಕುಶ್, ತಾಲೂಕ ವೈದ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ಡಾ.ಎಂ.ಎA.ಬೇಗ್, ಸಂತೋಷ ಪಾಟೀಲ, ಡಾ. ಶ್ವೇತಾ ಸೇರಿದಂತೆ ಮೆ.ಹೆಚ್.ಪಿ.ಸಿ.ಎಲ್, ಮೆ. ಬಿ.ಪಿ.ಸಿ.ಎಲ್, ಮೆ. ಎ೨ಎ ಪೆಟ್ರೋಪ್ರೋಡಕ್ಟ್÷್ಸ ಮತ್ತು ಮೆ. ಯುನೈಟೆಡ್ ಸ್ಪಿರಿಟ್ಸ್ ಕಾರ್ಖಾನೆ ಅಧಿಕಾರಿ-ಸಿಬ್ಬಂದಿಗಳು ಭಾಗಿಯಾಗಿದ್ದರು.
ಅರಿವು ಮೂಡಿಸಲು ಅಣಕು ಪ್ರದರ್ಶನ ಆಯೋಜನೆ: ಕಾರ್ಖಾನೆ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಮಾನವ ಹಾನಿ ತಪ್ಪಿಸಲು ಏನೆಲ್ಲ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಆಯಾ ಇಲಾಖೆಗಳ ಪಾತ್ರ ಏನು? ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಆಡಳಿತ ವರ್ಗಕ್ಕೆ ಮನವರಿಕೆ ಮಾಡಲು ಮತ್ತು ಕಾರ್ಮಿಕರಿಗೆ, ಕಾರ್ಖಾನೆ ಆಡಳಿತ ವರ್ಗ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂದಿಲ್ಲಿ ಆಫ್‌ಸೈಟ್ ಅಣಕು ಪ್ರದರ್ಶನ ಆಯೋಜಿಸಿದೆ ಎಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ಅವರು ಆಫ್ ಸೈಟ್ ಅಣಕು ಪ್ರದರ್ಶನಕ್ಕೆ ಸಾಥ್ ನೀಡಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು.