ಯುವ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ರಾಜೀಕ್ ಖಾನ್ ಆಯ್ಕೆ
ಸಂಜೆವಾಣಿ ವಾರ್ತೆ
ಕೆ ಆರ್ ನಗರ, ಆ.18:- ವಿಶ್ವನಾಯಕ ಡಾ. ಬಿ.ಆರ್ ಅಂಬೇಡ್ಕರ್ ಸೇನೆಯ ನೂತನ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ರಾಜೀಕ್ ಖಾನ್ ಆಯ್ಕೆ ಮೈಸೂರು.
ಪಟ್ಟಣದ ಮುಸ್ಲಿಂ ಬಡಾವಣೆಯ ತಮ್ಮ ನಿವಾಸದ ಸಭೆಯಲ್ಲಿ ವಿಶ್ವ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎನ್.ಶಿವರಾಜು ಹಾಗೂ ಗೌರವಧ್ಯಕ್ಷರಾದ ಅಫ್ಸರ್ ಪಾಷಾ ನವಾಜ್ ನೂರ್‍ಮೊಹಮ್ಮದ್ ಮುನವ್ವರ್ ಅಲಿ ಶಾಖಾದ್ರಿ ಸೋಹವರ್ದಿ ಮದಾರಿ ಗುರುಗಳು ಅವರ ಸಮ್ಮುಖದಲ್ಲಿ ಆದೇಶ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಿದ್ದರು.
ನೂತನ ಯುವ ಘಟಕದ ರಾಜ್ಯಾಧ್ಯಕ್ಷ ಮಾತನಾಡಿ ನನಗೆ ನೀಡಿರುವಂತಹ ಹುದ್ದೆ ಅಲ್ಲ ಇದು ಒಂದು ಸಾಮಾಜಿಕ ಜವಾಬ್ದಾರಿ ನನ್ನ ಮೇಲೆ ಇದೆ ಹಾಗೂ ಈ ಜವಾಬ್ದಾರಿಯನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸಂಚರಿಸಿ ನಮ್ಮ ಸಂಘಟನೆಯ ಬಗ್ಗೆ ಅರಿವನ್ನ ಮೂಡಿಸುವ ಮೂಲಕ ಸಂಘಟಿಸಲಾಗುವುದು ಎಂದು ತಿಳಿಸಿದರು.
ದೀನದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಮತ್ತು ಅನ್ನಾದಾತರ ಅನ್ಯಾಯಕ್ಕೆ ಒಳಗಾವರ ಪರ ಧ್ವನಿಯಾಗಿ ಹೊರ ಹೊಮ್ಮುವಂತಹ ಕೆಲಸ ನಿರ್ವಹಿಸುತ್ತೇನೆಂದರು.