ಮಲ್ಲೇಶ್ ಬಾಬು ಗೆಲುವಿಗೆ ಹೆಚ್‌ಡಿಕೆ ಕಾರಣ
ಕೋಲಾರ,ಆ,೧೮-ಮಲ್ಲೇಶ್ ಬಾಬು ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲ್ಲೂ ಕುಮಾರಸ್ವಾಮಿಯವರೇ ಕಾರಣ, ಈ ಕ್ಷೇತ್ರದಲ್ಲಿ ಜೆ.ಡಿ.ಎಸ್ ಪಕ್ಷದ ಸುಮಾರು ೫೦ ಸಾವಿರ ಮತಗಳು ಕುಮಾರಸ್ವಾಮಿಯವರದೇ ಪ್ರತ್ಯೇಕವಾಗಿ ಮೀಸಲಿದೆ ಹಾಗಾಗಿ ಅವರು ಗೆಲುವಿಗೆ ಕಾರಣವಾಯಿತು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಪ್ರತಿಪಾದಿಸಿದರು,
ನಗರ ಹೊರವಲಯದ ಮುಳಬಾಗಿಲು ರಸ್ತೆಯಲ್ಲಿನ ರತ್ನ ಕಾನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಬೆಳಿಗ್ಗೆ ಆಯೋಜಿಸಿದ್ದ, ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿರುವ ಎರಡು ಪಕ್ಷಗಳ ಮುಖಂಡರಿಗೆ ಕೃತಜ್ಞತಾ ಸಮಾರಂಭ ಹಾಗೂ ನೂತನ ಲೋಕಸಭಾ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ ನಾವೂಗಳು ಮೈತ್ರಿ ಮಾಡಿ ಕೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದ್ದೇವೆ, ನಮ್ಮ ನಿರೀಕ್ಷೆ ೨ ಲಕ್ಷ ಅಂತದಲ್ಲಿ ಗೆಲುವು ಸಾಧಿಸ ಬೇಕಾಗಿತ್ತು ಅದರೆ ನಾವು ೬೮ ಸಾವಿರ ಮಾತ್ರ ಹೆಚ್ಚುವರಿಯಾಗಿ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.
ಇದಕ್ಕೆ ಕಾರಣವೂ ಇದೇ ಕೋಲಾರ ಕ್ಷೇತ್ರದಲ್ಲಿ ಸುಮಾರು ೬೦ ಸಾವಿರ ಮತಗಳು ಗಂಡಾಂತರದಲ್ಲಿದೆ ಹಾಗಾಗಿ ಹಿಂದುಗಳಾದ ನಾವು ಒಗ್ಗಟಾಗಿರ ಬೇಕು ಇಲ್ಲವಾದಲ್ಲಿ ನಮ್ಮ ಮತಗಳು ಚದುರಿದರೆ ಆಲ್ಪಸಂಖ್ಯಾತರ ಮತಗಳು ಜೂತೆಗೆ ಕೆಲವು ಸಮುದಾಯದವರ ಮತಗಳು ಏನೇ ಬದಲಾವಣೆ ಅದರೂ ಅವರು ಕಾಂಗ್ರೇಸ್ ಪಕ್ಷ ಹೊರತು ಪಡೆಸಿ ಬೇರೆ ಪಕ್ಷಕ್ಕೆ ಹಾಕುವುದಿಲ್ಲ ಎಂದು ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಒಂದೊಮ್ಮೆ ಮಲ್ಲೇಶ್ ಬಾಬು ಅವರು ೨ ಲಕ್ಷ ಮತಗಳ ಅಂತರದಲ್ಲಿ ಇದ್ದವರೂ ಏಕಾ ಏಕಿ ಸತತವಾಗಿ ೨ ಸಾವಿರ ಮತಗಳ ಅಂತರದಲ್ಲಿ ಇಳಿಕೆಯಾಗಲು ಕಾರಣ ಆಲ್ಪಸಂಖ್ಯಾತgರಿರುವ ಮತಗಟ್ಟೆಗಳ ಮತಗಳೇ ಕಾರಣ ಎಂದು ವಿವರಿಸಿದರು
ನಮ್ಮ ಕ್ಷೇತ್ರದಲ್ಲಿ ೨೦೦ ಹಳ್ಳಿ ಗಳಿದ್ದು ಪ್ರತಿ ಹಳ್ಳಿಯಲ್ಲಿ ಕನಿಷ್ಟ ನಾವುಗಳು ೧೦೦ ಮತಗಳು ಪಡೆಯುವಂತಾದರೆ ೨೦ ಸಾವಿರ ಮತಗಳು ಗ್ಯಾರೆಂಟಿಯಾಗಿದ್ದರೆ ಇತರೆ ಸಾರ್ವಜನಿಕ ಮತಗಳು ಸೇರಿದಂತೆ ಗೆಲುವು ಸುಲಭವಾಗಲಿದೆ ಇದೇ ರೀತಿ ನಾವು ಸಿ.ಎಂ.ಆರ್. ಶ್ರೀನಾಥ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆ ಹೊಂದಲಾಗಿತ್ತು ಟಮ್ಯಾಟೂ ಕಾಸು ಚುನಾವಣೆಯಲ್ಲಿ ಎಷ್ಟೆ ಖರ್ಚು ಮಾಡಿದ್ದರೂ ಸಹ ಆಲ್ಪಸಂಖ್ಯಾರ ಏನೇ ಸಹಾಯ ಪಡೆದಿದ್ದರೂ ಶ್ರೀನಾಥ್ ಅವರ ನಿರೀಕ್ಷೆಯಂತೆ ಮತಗಳು ಬಾರದೆ ಹುಸಿಗೊಳಿಸಿತು ಎಂದು ದೂರಿದ ಅವರು ವಿಧಿಯ ಹಣೆಯ ಬರಹವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವೇದಾಂತಗಳನ್ನು ನುಡಿದರು.
ಸ್ಥಳೀಯ ಸಂಸ್ಥೆಗಳಾದ ನಗರಸಭೆಯ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಹಾಗೂ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರುಗಳು ಮನಸ್ಸು ಮಾಡಿದರೆ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಸರ್ವನಾಶ ಮಾಡಲೇ ಬೇಕು, ನಗರಸಭೆ ಚುನಾವಣೆಗೆ ಬಂಡಾವಳ ಅವರದು ಕೆಲಸ ನಮ್ಮದು ಎಂದರು,