ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದನ್ನು ಖಂಡಿಸಿ ವೈದ್ಯರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ.ಆ.18:-ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿಕರ್ತವ್ಯನಿರತ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದನ್ನು ಖಂಡಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದಜಿಲ್ಲಾಸ್ಪತ್ರೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಹತ್ಯೆ ಮಾಡಿದವರ ವಿರುದ್ಧಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಡಾ.ನಂದಕಿಶೋರ್ ಮಾತನಾಡಿ, ಕೊಲ್ಕತ್ತಾದಆರ್.ಜಿ.ಕರ್ ಸರ್ಕಾರಿ ವೈದ್ಯಕೀಯಕಾಲೇಜಿನಲ್ಲಿಕರ್ತವ್ಯನಿರತಯುವ ವೈದ್ಯೆ ಮೇಲೆ ನಡೆದಅತ್ಯಾಚಾರ ಹಾಗೂ ಕೊಲೆ ಖಂಡನೀಯ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ 1-3 ಸಾವಿರಜನರ ಗುಂಪು ಆಸ್ಪತ್ರೆಗೆ ದಾಳಿ ಮಾಡಿ ಪುರಾವೆಗಳನ್ನು ನಾಶಪಡಿಸಿದ್ದಾರೆ. ಕೂಡಲೇ ನ್ಯಾಯಾಲಯವು ಹತ್ಯೆಯಾಗಿರುವ ಹೆಣ್ಣು ಮಗಳಿಗೆ ಸೂಕ್ತ ನ್ಯಾಯಕೊಡಿಸಬೇಕು. ಅತ್ಯಾಚಾರ ಹಾಗೂ ಹತ್ಯೆ ಮಾಡಿದವರಿಗೆಕಠಿಣ ಶಿಕ್ಷೆ ವಿಧಿಸಬೇಕುಎಂದು ಆಗ್ರಹಿಸಿದರು.ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಈ ಘಟನೆಯಿಂದ ವೈದ್ಯರಿಗೆರಕ್ಷಣೆಇಲ್ಲದಂತಾಗಿದೆ.
ರಾಜ್ಯ ಸರ್ಕಾರದರಾಜ್ಯದಲ್ಲಿಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಭದ್ರತೆಒದಗಿಸಬೇಕು. ಈ ಘಟನೆಯನ್ನು ಖಂಡಿಸಿ ಸಿಮ್ಸ್ ರೆಸಿಡೆಂಟ್ ಅಸೋಸಿಯೇಷನ್ ವತಿಯಿಂದಒಪಿಡಿಯನ್ನು ರದ್ದುಪಡಿಸಿ ಧರಣಿ ಮಾಡಲಾಗುತ್ತದೆ. ಆದರೆ, ತುರ್ತು ಸೇವೆಗಳನ್ನು ಒದಗಿಸಲಾಗುತ್ತಿದೆಎಂದು ಹೇಳಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಮ್ಸ್ ಬೋಧನಾಆಸ್ಪತ್ರೆಯಡೀನ್‍ಡಾ.ಮಂಜುನಾಥ್‍ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿಡಾ.ಮಾರುತಿ, ಡಾ.ಶಿವಸ್ವಾಮಿ ಇದ್ದರು.
ಪ್ರತಿಭಟನೆಯಲ್ಲಿ ಅಸೋಸಿಯೇಷನ್‍ನ ಅಧ್ಯಕ್ಷಡಾ.ಪವನ್, ಉಪಾಧ್ಯಕ್ಷೆಡಾ.ಸ್ನೇಹ, ಪ್ರಧಾನ ಕಾರ್ಯದರ್ಶಿ ಡಾ.ತರುಣ್, ಖಜಾಂಚಿಡಾ.ದಿವ್ಯ, ಡಾ.ಸಂಜು, ಡಾ.ಅಭಿμÉೀಕ್‍ಕುಮಾರ್, ಡಾ.ಅರ್ಚನಾ, ಡಾ.ಸೈಯದ್ ಜಾಸ್ಮೀನ್, ಡಾ.ಸಮೃದ್ಧಿ, ಡಾ.ಅತುಲ್, ಡಾ.ತೇಜಸ್, ಡಾ.ಕೀರ್ತಿ, ಡಾ.ವಿನುತಾ, ಡಾ.ತನ್ಮಯ್ ಸೇರಿದಂತೆಇತರರು ಭಾಗವಹಿಸಿದ್ದರು.