ಓರ್ವ ಅಂತರ್ ರಾಜ್ಯ ಕಳ್ಳ ಸೆರೆ
ಸಂಜೆವಾಣಿ ನ್ಯೂಸ್
ಮೈಸೂರು,ಆ18:- ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಅಂತರ್ ರಾಜ್ಯ ಕಳ್ಳ ಸೆರೆಯಾಗಿದ್ದಾನೆ.ಆರೋಪಿಯಿಂದ 6 ಲಕ್ಷ ಮೌಲ್ಯದ ಗೂಡ್ಸ್ ವಾಹನ 1.20 ಲಕ್ಷ ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಜಮ್ಮು ಕಾಶ್ಮೀರ ರಾಜ್ಯದ ನಿವಾಸಿ ಮಹಮದ್ ರಮ್ಜಾನ್(21) ಬಂಧಿತ ಚೋರ.ಕುವಪುನಗರದಲ್ಲಿರುವ ಶಂಕರ್ ಬಿಲ್ಡ್ ಪ್ರೋ ಕಂಪನಿಗೆ ಸೇರಿದ ಗೂಡ್ಸ್ ವಾಹನವನ್ನ ಈತ ಕಳುವು ಮಾಡಿದ್ದ.
ಈ ಕುರಿತಂತೆ ಕಂಪನಿ ವ್ಯವಸ್ಥಾಪಕರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಪೊಲೀಸರು ಕಳ್ಳನನ್ನ ಬಂಧಿಸಿ ಗೂಡ್ಸ್ ವಾಹನವನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ವಿಚಾರಣೆ ವೇಳೆ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಪಲ್ಸರ್ ಬೈಕ್ ಪ್ರಕರಣ ಸಹ ಪತ್ತೆಯಾಗಿದೆ.ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಹಾಗೂ ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಎಲ್.ಅರುಣ್ ರವರ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಗೋಪಾಲ್,ಮದನ್ ಕುಮಾರ್,ಸಿಬ್ಬಂದಿಗಳಾದ ಆನಂದ್,ಮಂಜುನಾಥ್,ಮಹೇಶ್ವರ್,ಮಂಜು,ನಾಗೇಶ್,ಯಶವಂತ್ ಹಾಗೂ ಹಜರತ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ರವರು ಶ್ಲಾಘಿಸಿದ್ದಾರೆ.