ಭಾರತ ಭೂಮಿ ಇಡೀಜಗತ್ತಿನಲ್ಲೇ ಸರ್ವಶ್ರೇಷ್ಠ ಭೂಮಿಯಾಗಿದೆ: ದಾನೇಶ್ವರೀಜೀ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.18- ಭಾರತ ಭೂಮಿ ಇಡೀ ಜಗತ್ತಿನಲ್ಲೇ ಸರ್ವಶ್ರೇಷ್ಠ ಭೂಮಿಯಾಗಿದೆ ಎಂದು ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕøತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಬಣ್ಣಿಸಿದ್ದಾರೆ.
ನಗರದ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿಈಶ್ವರೀಯ ವಿಶ್ವವಿದ್ಯಾಲಯದಆವರಣದಲ್ಲಿ 78ನೇ ಸ್ವತಂತ್ರೋತ್ಸವದ ಅಂಗವಾಗಿ ತ್ರಿವರ್ಣ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, -ಭಾರತ ಭೂಮಿ ಇಡೀ ಜಗತ್ತಿನಲ್ಲೇ ಸರ್ವಶ್ರೇಷ್ಠ ಭೂಮಿಯಾಗಿದೆ.ಇಲ್ಲಿನ ಜನರಲ್ಲಿ ಶಾಂತಿ, ಸಹನೆ ಇದೆ, ಸಹಯೋಗದ ಭಾವನೆ ಇದೆ ಎಂದರು.
ಇಂದು ನಾವು 78ನೇ ಸ್ವತಂತ್ರೋತ್ಸವ ಆಚರಿಸುತ್ತಿದ್ದೇವೆ. ಆದರೆ ಯಾವ ಸ್ವಾತಂತ್ರ್ಯ ಬೇಕಾಗಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಸ್ವಯಂನ ಮೇಲೆ ಸ್ವತಂತ್ರ ಸಿಕ್ಕಿಲ್ಲ ಸ್ವಅಂದ್ರೆ ಆತ್ಮತಂತ್ರ ಅಂದ್ರೆ ಆಡಳಿತ ಸ್ವಯಂ ಮೇಲೆ ನಿಯಂತ್ರಣ ಹೊಂದುವುದು. ಇಂದು ನಾವು ಇಂದಿರಗಳಿಗೆ ಗುಲಾಮರಾಗಿದ್ದೇವೆ ಗಾಂಧೀಜಿಯವರು ಹೇಳುತ್ತಿದ್ದರು ಅರ್ಧರಾತ್ರಿ ಮಹಿಳೆ ನಿರ್ಭಯವಾಗಿ ಎಲ್ಲಿವರೆಗೂ ಓಡಾಡುವುದಿಲ್ಲ ಅಲ್ಲಿವರೆಗೆ ರಾಮರಾಜ್ಯ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಇಂದು ಹಗಲಲ್ಲಿ ಮಹಿಳೆಯರು ಓಡಾಡಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.
ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದುಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ ಎಂದರು.
ಆಸರೆ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಟಿ.ಜೆ. ಸುರೇಶ್ ಮಾತನಾಡಿ, ತಮ್ಮ ಸ್ವಾತಂತ್ರ್ಯವನ್ನು ಇತರರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ, ಸಮಸ್ಯೆ ಆಗದಂತೆ ಬಳಸಿಕೊಳ್ಳಬೇಕು ಎಂಬುದನ್ನು ಯಾರು ಮರೆಯಬಾರದು.
ಭಾರತವು ಬ್ರಿಟಿ ಸಾಮ್ರಾಜ್ಯದೊಳಗೆ ಬದುಕುವುದುಎಷ್ಟು ಕಷ್ಟಕರವಾಗಿತ್ತು ಎಂದು ನಾವು ಊಹಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯವನ್ನು ಸಾಧಿಸಲು, ಹಲವಾರು ವರ್ಷಗಳಿಂದ ಲಕ್ಷಾಂತರ ತ್ಯಾಗಗಳನ್ನು ಮಾಡಲಾಗಿದೆ ಅದಕ್ಕೆ ಗೌರವ ಕೊಟ್ಟಾಗ ನಾವು ಸ್ವಾಂತಂತ್ರ್ಯ ಆಚರಣೆ ಮಾಡುವುದಕ್ಕೆ ಒಂದು ಮೌಲ್ಯ ಬರುತ್ತದೆ ಎಂದರು.
ಇನ್ಹರ್‍ವೀಲ್ ಸಂಸ್ಥೆಯ ಲಕ್ಷ್ಮಿ ಶಿವಕುಮಾರ್ ಮಾತನಾಡಿ ಭಾರತದ ಸ್ವತಂತ್ರಕ್ಕಾಗಿ ಹೋರಾಡಿದವರ ನೆನಪು ಮಾಡುವಂತಹ ಒಂದು ಸುವರ್ಣ ಅವಕಾಶ ಸ್ವತಂತ್ರೋತ್ಸವ ಆಚರಣೆಯಿಂದ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸರ್ವಿಸ್‍ನ ಬಿಕೆ ಆರಾಧ್ಯ, ಶ್ರೀನಿವಾಸ್,ಗೀತಾ, ಆಶಾ, ಕಮಲಮ್ಮ, ಸುನಿತಾ, ಶಿವಕುಮಾರ್, ಲಕ್ಷ್ಮಿನರಸಿಂಹ ಪ್ರಸಾದ್ ಹಾಜರಿದ್ದರು.