ಚಿತ್ರಕಲೆ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ: ಹರ್ಷ
ವಾಡಿ,ಆ.೧೮- ಪಟ್ಟಣದ ಮಹಾತ್ಮಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಫರಾಜಿನ್ ಬೇಗಂ ಸೈಯದ್ ಫಿರೋಜ್ ಖ್ವಾದ್ರಿ ೭ನೇ ತರಗತಿ ವಿದ್ಯಾರ್ಥಿನಿ ಹರ್ ಘರ್ ತಿರಂಗ ಚಿತ್ರಕಲೆ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಕೀರ್ತಿ ಹೆಚ್ಚಿಸಿದ್ದಾಳೆ.
ಕಲಬುರ್ಗಿ ವಿಜ್ಞಾನ ಕೇಂದ್ರದಲ್ಲಿ ಅ.೧೪ರಂದು ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾಳೆ. ೮ನೇ ತರಗತಿ ವಿದ್ಯಾರ್ಥಿನಿ ಸಂತೋಷಿ ಬಾಸ್ಟಿಮಲ್ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಶೇಖ ಅನ್ವರ್ ಖಾನ್, ಮುಖ್ಯಶಿಕ್ಷಕ ಬಸವರಾಜ ಹಾಗೂ ಶಿಕ್ಷಕ ವೃಂದ್ಧ ಹರ್ಷ ವ್ಯಕ್ತಪಡಿಸಿದ್ದಾರೆ.