ಸಿಎಂ ವಿರುದ್ಧ ರಾಜ್ಯಪಾಲರ ತನಿಖೆಯ ಆದೇಶಕ್ಕೆ ಖಂಡನೆ
ಕಲಬುರಗಿ,ಆ.೧೮- ದೇವರಾಜ ಅರಸು ಹಾಗೂ ದಿವಂಗತ ಬಂಗಾರಪ್ಪನವರ ನಂತರ ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿ ಸಮಸ್ತ ರಾಜ್ಯದ ಹಿಂದುಳಿದ ವರ್ಗದ ಚಿಂತನೆಯಲ್ಲಿ ತೊಡಗಿರುವಂತಹ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ರಾಜ ಪಾಲರು ಏಕಾ ಏಕಿ ಅನುಮತಿ ನೀಡಿದ್ದನ್ನು ಕೂಡಲೇ ವಾಪಸ ಪಡೆಯುವಂತೆ ಮುಖಂಡರಾದ ಬಸವರಾಜ್ ಬೂದಿಹಾಳ್, ನಂದ ಕುಮಾರ್ ಪಾಟೀಲ, ಮನೋಹರ್ ಪೊದ್ದರ್, ಲೋಹಿತ್ ಕಲ್ಲೂರ್, ಸಂತೋಷ್ ತಳವಾರ್ ಅವರು ಒತ್ತಾಯಿಸಿದ್ದಾರು.
ರಾಜ್ಯದಲ್ಲಿ ಸಂವಿಧಾನಬದ್ಧವಾಗಿ ಅತ್ಯಂತ ಬಹುಮತದೊಂದಿಗೆ ಅಧಿಕಾರ ಸ್ವೀಕರಿಸಿ ರಾಜ್ಯಭಾರ ಮಾಡುತ್ತಿರುವಂತಹ ಮುಖ್ಯಮಂತ್ರಿಗಳನ್ನ ವಿನಾ:ಕಾರಣ ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ರಾಜಕೀಯ ಪ್ರೇರಿತವಾದಂತ ತನಿಖೆಗೆ ರಾಜ್ಯಪಾಲರು ಕೇಂದ್ರ ಸರ್ಕಾರ ಹಾಗೂ ಬಿಜೆಪಿಯವರ ಒತ್ತಡಕ್ಕೆ ಮಣಿದು ಅವರ ಕೈಗೊಂಬೆಯಾಗಿ ನಮ್ಮ ಹಿಂದುಳಿದ ವರ್ಗದ ನಾಯಕರ ವಿರುದ್ಧ ಈ ರೀತಿ ಕ್ರಮಕ್ಕೆ ಆದೇಶಿಸುವುದನ್ನು ಸಮಸ್ತ ರಾಜ್ಯದ ಹಿಂದುಳಿದ,, ಶೋಷಿತ ವರ್ಗಗಳ ಪರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸಂವಿಧಾನತ್ಮಕವಾದ ಹುದ್ದೆಯಲ್ಲಿ ಇದುಕೊಂಡು ಘನತೆಯಿಂದ ಕಾರ್ಯ ಭಾರ ನಡೆಸಬೇಕಾದ ಮಾನ್ಯ ರಾಜ್ಯಪಾಲರು ಈ ರೀತಿಯಾಗಿ ಒಂದು ಪಕ್ಷದ ಒತ್ತಡಕ್ಕೆ ಮಣಿದು ಆವರ ಕೈಗೊಂಬೆಯಾಗಿ ಸಂವಿಧಾನ ಬಾಹಿರ ಕ್ರಮಗಳನ್ನು ಜರಗಿಸಿರು ಖಂಡನೀಯ..