ಸಿದ್ದರಾಮಯ್ಯ ಕಳಂಕ ರಹಿತ ರಾಜಕರಣಿ:ಶರಣಬಸಪ್ಪಗೌಡ ದರ್ಶನಾಪೂರ
ಸಂಜೆವಾಣಿ ವಾರ್ತೆ
ಕೆಂಭಾವಿ:ಮುಖ್ಯಮAತ್ರಿ ಸಿದ್ದರಾಮಯ್ಯನವರು ಕಳಂಕ ರಹಿತ ರಾಜಕಾರಣಿ. ಜೀವನದುದ್ದಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡಿದವರು. ಅಂತಹವರ ವಿರುದ್ಧ ಇಂದು ವಿರೋಧ ಪಕ್ಷದವರು ಷಡ್ಯಂತ್ರ ರೂಪಿಸಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯ ಸರಕಾವನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಮೊಕದ್ದಮೆಗಳನ್ನು ಹೂಡಿ ಬೆದರಿಸುವ ತಂತ್ರಗಾರಿಕೆ ಮಾಡುತ್ತಿದೆ. ಮೂಡಾ ಕೇಸ್ ಒಂದು ಹಗರಣವೆ ಅಲ್ಲ. ಮುಖ್ಯಮಂತ್ರಿಗಳು ಕಾನೂನು ಬಾಹಿರವಾಗಿ ಯಾವದೆ ಚಟುವಟಿಕೆಯನ್ನು ಅಲ್ಲಿ ಮಾಡಿಲ್ಲ. ತಮ್ಮ ಪತ್ನಿಯವರು ಕಳೆದುಕೊಂಡ ಜಾಗಕ್ಕೆ ಪರ್ಯಾಯವಾಗಿ, ಕಾನೂನು ಬದ್ಧವಾಗಿಯೆ ಮೂಡಾದಿಂದ ಸೈಟುಗಳನ್ನು ಪಡೆದಿದ್ದಾರೆ. ಅದು ಬಿಜೆಪಿ ಸರಕಾರವೆ ರಾಜ್ಯದಲ್ಲಿದ್ದಾಗ.
ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರಕಾರ ಇರುವ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸವಲತ್ತುಗಳನ್ನು ನೀಡುತ್ತಿದೆ, ಬೇರೆ ಪಕ್ಷಗಳು ಇರುವ ರಾಜ್ಯಗಳಿಗೆ ಕಡಿಮೆ ಹಣಕಾಸು ನೀಡುತ್ತಿದೆ. ಕರ್ನಾಟಕದಿಂದ ಹೆಚ್ಚು ತೆರಿಗೆ ಕೇಂದ್ರಕ್ಕೆ ಹೋಗುತ್ತಿದ್ದರೂ ನಮಗೆ ನ್ಯಾಯಸಮ್ಮತವಾದ ನಮ್ಮ ಪಾಲನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಮಾಜಿ ಸಚಿವರ ಮೇಲೆ ಅನೇಕ ದೂರುಗಳಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಸಿನಿಗೆ ಅವಕಾಶ ನೀಡಲಿಲ್ಲ. ಬಿಜೆಪಿಯವರು ಹತಾಶೆಯಿಂದ ನಮ್ಮ ಸರಕಾರ ಕೆಡವಲು, ಮುಖ್ಯಮಂತ್ರಿಗಳ ಹೆಸರು ಕೆಡಿಸಲು ರಾಜ್ಯಪಾಲರ ಮೂಲಕ ಪ್ರಾಸಿಕೂಸನ್ ಅವಕಾಶ ನೀಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಮಾಡುತ್ತಿರುವ ಕೆಲಸ.
ಮುಖ್ಯಮಂತ್ರಿಗಳು ಒಬ್ಬ ಕ್ಲೀನ್ ರಾಜಕಾರಣಿಯಾಗಿದ್ದಾರೆ. ಅವರ ಜೊತೆ ಸಚಿವ ಸಂಪುಟ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಬಿಜೆಪಿಯ ಗೊಡ್ಡು ಬೆದರಿಕೆಗೆ ಬಗ್ಗುವದಿಲ್ಲ. ಎಲ್ಲವನ್ನು ಕಾನೂನು ರೀತಿಯಲ್ಲೆ ಉತ್ತರ ನೀಡುತ್ತೆವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಶಂಕ್ರಣ್ಣ ವಣಿಕ್ಯಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ, ವಾಮನರಾವ ದೇಶಪಾಂಡೆ, ಶಿವರಾಜ ಬೂದೂರ, ರಂಗಪ್ಪ ವಡ್ಡರ ಸೇರಿದಂತೆ ಅನೇಕರಿದ್ದರು.