ಮುಡಾ-ವಾಲ್ಮೀಕಿ ಹಗರಣ ಖಂಡಿಸಿ ತಹಸೀಲ್ದಾರ್ ಗೆ ಮನವಿ
ಕಾಳಗಿ,ಆ.೧೮- ಸಂವಿಧಾನ ರಕ್ಷಣೆ, ದಲಿತಪರ ಕಾಳಜಿ ವಹಿಸುವ ನಮ್ಮ ಕಾಂಗ್ರೆಸ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಾ, ಯಾವುದೇ ಜನಪರ ಯೋಜನೆಗಳು ಜಾರಿಗೆ ತಂದು ಅಭಿವೃದ್ಧಿ ಮಾಡದೆ. ಕಾಲಹರಣ ಮಾಡುತ್ತಿರುವ ಈ ಸರ್ಕಾರದಲ್ಲಿ ನಡೆದ ಭ್ರಷ್ಟಚಾರದ ವಿರುದ್ಧ ಇಲ್ಲಿಯ ತಾಲೂಕು ಹಿಂದೂ ಜಾಗೃತಿ ಸೇನೆ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಗ್ರೇಡ್-೧ ತಹಸೀಲ್ದಾರ್ ಮುಖಾಂತರÀ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿಅತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ತಾಲೂಕು ಹಿಂದೂ ಜಾಗೃತಿ ಸೇನೆ ಅಧ್ಯಕ್ಷ ಶಂಕರ ಚೋಕಾ ಅವರು, ಹಿಂದೂ ವಿರೋಧಿಯಾಗಿ ರಾಜ್ಯವನ್ನು ಆಳುತ್ತಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಆಸೆ -ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದು, ತಮ್ಮ ಸುಧೀರ್ಘ ವಾದ ೪೦ ವರ್ಷಗಳ ರಾಜಕೀಯ ಬದುಕಿನಲ್ಲಿ ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಹಗರಣ ಮಾಡಿ, ತಮ್ಮ ರಾಜಕೀಯ ಬದುಕಿಗೆ ಕಳಂಕ ತಂದುಕೊAಡಿದ್ದಾರೆ.
ಹಿಗಾಗಿ ರಾಜ್ಯದ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಇಂತಹ ಭ್ರಷ್ಟಾಚಾರವನ್ನು ರಾಜ್ಯದ ಜನತೆ ಸಹಿಸುವುದಿಲ್ಲ ಎಂದರು.
ಎ.ಸಿ.ಪಿ ಮತ್ತು ಟಿ.ಎಸ್ .ಪಿ ಯೋಜನೆಗಳ ಹಣ ನುಂಗಿ ದಲಿತಪರ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಮುಡಾ ಹಗರಣ ಸ್ಪಷ್ಟವಾಗಿ ಜನತೆಯ ಮುಂದೆ ಕಾಣುತ್ತಿದ್ದರೂ ಕೂಡಾ ನಾವು ಬಲು ಸಾಚಾಗಳು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸರ್ಕಾರ ಹಗರಣಗಳ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಚಿಂಚೋಳಿ ಮಂಡಲ ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೆಂಗಟಾ, ಕಲಬುರಗಿ ಜಿಲ್ಲಾ ಗ್ರಾಮೀಣ ಹಿಂದುಳಿದ ವರ್ಗಗಳ ಮೋರ್ಚಾದ ಕೋಶಾಧ್ಯಕ್ಷ ರಾಜಕುಮಾರ ರಾಜಾಪುರ ಕಾಳಗಿ, ರಾಜಶೇಖರ ಗುಡದಾ, ರೈತ ನಾಯಕ ವೀರಣ್ಣ ಗಂಗಾಣಿ ಮಾತನಾಡಿದರು.
ಪ್ರಶಾಂತ ಕದಂ, ಜಗದೀಶ ಮಾಲಿಪಾಟೀಲ, ರಮೇಶ ಕಿಟ್ಟದ, ಸುನೀಲ ರಾಜಾಪುರ, ಮಹೀಂದ್ರ ಪೂಜಾರಿ, ಸುಂದರ ಡಿ.ಸಾಗರ, ಕರಣ ರಾಜಾಪುರ, ಶಿವುಕುಮಾರ ಕೊಡಸಾಲಿ, ಶರಣು ಮೋಘಾ, ಸಂಗಮೇಶ ತಾಂಡೂರ ಕೋಡ್ಲಿ, ಜಗನ್ನಾಥ ತೇಲಿ, ಕೇಸು ನಾಯಕ, ದೇವಜೀ ಜಾಧವ, ಈರಣ್ಣಗೌಡ(ಸದಾನಂದಗೌಡ) ತೆಂಗಳಿ, ರಾಜು ಸಿಳ್ಳಿನ, ಬಲರಾಮ ವಲ್ಲ್ಯಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.