ರಾಜ್ಯಪಾಲರ ಅಧಿಕಾರ ದುರುಪಯೋಗ : ಸಿಪಿಐಎಂ ಖಂಡನೆ
ಕಲಬುರಗಿ,ಆ.೧೮- ಆರ್‌ಟಿಐ ಕಾರ್ಯಕರ್ತರೊಬ್ಬರ ಕೋರಿಕೆಯ ಮೇರೆಗೆ ಘನತೆವೆತ್ತ ರಾಜ್ಯಪಾಲರು ಈ ಹಿಂದೆ ಧಿಡೀರನೆ ಅಂದೇ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದರು. ಇದೀಗ ಪ್ರಜಾಸತ್ತಾತ್ಮಕ ವಾಗಿ ಆಯ್ಕೆಯಾಗಿರುವ ಒಂದು ಸರಕಾರದ ಮುಖ್ಯಮಂತ್ರಿಯ ಮೇಲೆ ಎಫ್ ಐ ಆರ್ ದಾಖಲಿಸಲು ಅನುಮತಿ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ದುಷ್ಕೃತ್ಯ ವಾಗಿದೆಯೆಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ರಾಜ್ಯಪಾಲರೊಬ್ಬರು ಸಾಮಾನ್ಯ ಪ್ರಜೆಯೊಬ್ಬರ ಮನವಿ ಮೇರೆಗೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೀಡುವ ಮತ್ತು ಪ್ರಾಸಿಕ್ಯೂಷನ್ ಗೆ ಅವಕಾಶ ನೀಡುವ ಈ ಪ್ರಜಾಪ್ರಭುತ್ವ ವಿರೋದಿ ಬೆಳವಣಿಗೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳಲ್ಲಿ ಆತಂಕ ಮೂಡಿಸಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ, ರಾಜ್ಯ ಕಾರ್ಯದರ್ಶಿ ಮಂಡಳೊ ಸದಸ್ಯೆ ಹಾಗು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅವರು ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳು ಈಗಾಗಲೆ ಮೂಡಾ ಪ್ರಕರಣಕ್ಕೆ ಸಂಬAದಿಸಿ ವಿಧಾನ ಸಭೆಯಲ್ಲು ಹಾಗೂ ನೇರ ರಾಜ್ಯಪಾಲರಿಗೂ ವಿವರವಾದ ಮಾಹಿತಿ ನೀಡಿದ್ದಾರೆ ಮತ್ತು ಪ್ರಕರಣಕ್ಕೆ ಸಂಬAದಿಸಿ ನ್ಯಾಯಾಂಗ ತನಿಖೆಗೆ ಕ್ರಮವಹಿಸಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲು, ಈ ರೀತಿಯ ಕ್ರಮ ಸ್ಪಷ್ಟವಾಗಿ ಇದೊಂದು ಅಧಿಕಾರ ದುರುಪಯೋಗವಾಗಿದೆ. ರಾಜ್ಯ ಸರಕಾರವನ್ನು ಅಧಿಕೃತವಾಗಿ ಪ್ರತಿನಿಧಿಸುವ ಘನತೆವೆತ್ತವರು ವಿರೋದ ಪಕ್ಷದ ನಾಯಕರಂತೆ ಕ್ರಮವಹಿಸುತ್ತಿರುವುದು ಮತ್ತು ಬಿಜೆಪಿಯ ಒಕ್ಕೂಟ ಸರಕಾರದ ದಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಲೋಕಾಯುಕ್ತರು ತನಿಖೆ ಆಧಾರದಲ್ಲಿ ಈಗಿನ ಒಕ್ಕೂಟ ಸರಕಾರದ ಸಂಪುಟ ದರ್ಜೆಯ ಸಚಿವ ಶ್ರೀ ಕುಮಾರ ಸ್ವಾಮಿಯವರಿಗೆ ಸಂಬAದಿಸಿ ಮನವಿ ಮಾಡಿ ಸುಮಾರು ಹತ್ತು ತಿಂಗಳಾಗುತ್ತಿದ್ದರು ಏನೊಂದು ಕ್ರಮವಹಿಸದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಕ್ರಮಕ್ಕೆ ಮುಂದಾಗಿರುವುದು ಬಹಳ ಸ್ಪಷ್ಟವಾಗಿ ರಾಜ್ಯಪಾಲರ ಕಛೇರಿಗಳನ್ನು ದುರುಪಯೋಗ ಮಾಡುವ ಬಿಜೆಪಿ ಹಾಗೂ ಒಕ್ಕೂಟ ಸರಕಾರದ ಮುಂದುವರೆದ ದುರ್ನಡೆಯ ಭಾಗವಾಗಿದೆಯೆಂದು ಬಲವಾಗಿ ಖಂಡಿಸುತ್ತದೆ.
ಬಿಜೆಪಿ ಮತ್ತು ಅದರ ಒಕ್ಕೂಟ ಸರಕಾರ ವಿರೋಧ ಪಕ್ಷಗಳ ಸರಕಾರಗಳನ್ನು ದುರ್ಬಲಗೊಳಿಸಲು ಇಲ್ಲವೆ ಅಗತ್ಯ ಬಹುಮತವಿಲ್ಲದಿದ್ದರೂ ಬಲವಂತವಾಗಿ ಬಿಜೆಪಿಯ ಸರಕಾರ ಸ್ಥಾಪನೆಗೆ ಕ್ರಮವಹಿಸಲು ರಾಜ್ಯಪಾಲರ ಕಛೇರಿ ಹಾಗೂ ಅವರ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಅನುಭವವೇದ್ಯವಾಗಿದೆ ಎಂದು ಸಿಪಿಐಎಂ ವಿವರಿಸಿದೆ.
ಬಿಜೆಪಿ ಹಾಗೂ ಒಕ್ಕೂಟ ಸರಕಾರಗಳು ರಾಜ್ಯ ಸರಕಾರದ ಮೇಲೆ ನಡೆಸುತ್ತಿರುವ ಪ್ರಜಾಪ್ರಭುತ್ವ ಹಾಗೂ ಜನವಿರೋದಿ ಈ ದುರ್ಧಾಳಿಗಳನ್ನು ಈ ಕೂಡಲೆ ನಿಲ್ಲಿಸುವಂತೆ ಸಿಪಿಐಎಂ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳು ಬಿಜೆಪಿಯ ಇಂತಹ ಪ್ರಜಾಪ್ರಭುತ್ವ ವಿರೋದಿ ದುರ್ನಡೆಯನ್ನು ಪ್ರತಿರೋದಿಸಲು ಮನವಿ ಮಾಡುತ್ತದೆ..