ನಸಿರವಾಡಿಯಲ್ಲಿ ಜಾನಪದ ಉತ್ಸವ ಸಂಭ್ರಮ
ಆಳAದ.ಆ.೧೮: ತಾಲೂಕಿನ ನಸಿರವಾಡಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ ನಸಿರವಾಡಿ ಆಯೋಜಿಸಿದ್ದ ತತ್ವಪದ ಉತ್ಸವ ಕಾರ್ಯಕ್ರಮವನ್ನು ಗ್ರಾಮದ ಸಂಜಯ ಪಾಟೀಲ ಅವರು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಪಾಟೀಲ ಅವರು, ಸಂತ- ಮಹಾಂತರತ ಜ್ಞಾನಿಗಳ ಅನುಭವ ಮತ್ತು ಜನ ಮಾನಸಕ್ಕೆ ಮಾರ್ಗದರ್ಶನ ಮಾಡುವ ಅವರ ತತ್ವಗಳ ಪದವನ್ನು ಇಂದಿಗೂ ನಮಗೆ ಪ್ರೇರಣೆ ದಾರಿ ದೀಪವಾಗಿವೆ. ಇಂಥ ತತ್ವಪದ ಉತ್ಸವ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಜನಪದ ಜೀವನ ಮತ್ತು ಸಾಧನೆಯ ಮೆಲಕು ಹಾಕಲು ಸಾಧ್ಯವಾಗುತ್ತಿದೆ. ಅಳಿದುಳಿದ ತತ್ವಪದಕಾರರನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಗ್ರಾಮದ ಹಿರಿಯ ಶಿವಾಜಿ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಜಬಾಯಿ ಸಾಸ್ತುರೆ, ವಸಂತಬಾಯಿ ಪಾಟೀಲ, ಮಹಾನಂದ ಯಂಕಟ್ಟಿ, ಶಿವಾನಂದ ಮತ್ತಿತರು ಆಗಮಿಸಿದ್ದರು.
ಗಾಯಕ ಅಭಿಮನ ತಂಗಮಗೊಳ, ಬಸವರಾಜ, ದತ್ತು ಯಂಕಟ್ಟಿ, ಬೆಳಮಗಿಯ ಬಸವರಾಜ ಪೂಜಾರಿ, ಅಂಬರಾಯ ನಸಿರವಾಡಿ ಅವರ ತತ್ವಪದಗಳಿಗೆ ಹಾರ್ಮೋನಿಯಂ ಸಾಥಿ ಬಾಲಾ ಶಿರಸಿವಾಡಿ, ಮೋಹನ ಮತ್ತು ತಬಲಾ ಧರ್ಮರಾಯ ಬಾಲ್ಕಿ, ಮಹಾಂತಗೌಡ ಪಾಟೀಲ ಶುಕ್ರವಾಡಿ ಅವರು ತತ್ವಗಳ ಗಾಯನ ಜನಮನ ಸೆಳೆಯಿತು.