ಖರೀದಿಕೇಂದ್ರ ಆರಂಭಕ್ಕೆ ಆಗ್ರಹ
ನವಲಗುಂದ,ಆ17 : ಹೆಸರಿಗೆ ಬೆಂಬಲ ಬೆಲೆಯನ್ನು 10,000 ರೂ ನಿಗದಿ ಪಡಿಸಿ ಕೂಡಲೇ ಹೆಸರು ಖರೀದಿ ಕೇಂದ್ರವನ್ನು ಪ್ರಾರಂಬಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಜ್ಯಾತ್ಯಾತೀತ ಕಳಸಾ ಬಂಡೂರಿ ಹೋರಾಟ ಸಮೀತಿ ತಹಶೀಲ್ದಾರ್ ಕಚೇರಿ ಶಿರೇಸ್ತದಾರ ಕೃಷ್ಣಾಜಿ ಅರೇರ ಮೂಲಕ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಧ್ಯಕ್ಷ ರಘುನಾಥ ನಡುವಿನಮನಿ ಮಾತನಾಡಿ ಕೂಡಲೇ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಬೇಕು 2023-24 ನೇ ಹಿಂಗಾರು ಬೆಳೆ ವಿಮೆಯಲ್ಲಿ ನವಲಗುಂದ ತಾಲೂಕಿನಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರವಾಗಿರುತ್ತದೆ, ಕೇವಲ ನವಲಗುಂದ ತಾಲೂಕಿನಲ್ಲಿ ದಾಟನಾಳ ಮತ್ತು ತಡಹಾಳ ಪಂಚಾಯತ್ ಗೆ ಮಾತ್ರ ಬೆಳೆ ವಿಮೆ ಕ್ಲೇಮ್ ಆಗಿರುತ್ತದೆ. ಮೇಲ್ನೋಟಕ್ಕೆ ಬೆಳೆ ವಿಮ ಕಂಪನಿಯವರು ರೈತರ ವಿಷಯದಲ್ಲಿ ಸತತವಾಗಿ ಮೋಸ ಮಾಡಿರುತ್ತಾರೆ. ಈ ಕುರಿತು ರೈತ ಮುಂಖಡರನ್ನು ಒಳಗೊಂಡು ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದರು.
ನೀರಾವರಿ ಇಲಾಖೆಯ ಎಲ್ಲ ಕಾಲುವೆಗಳು ಹೂಳು ತುಂಬಿ ರೈತರಿಗೆ ನೀರು ಹಾಯಿಸಲಿಕ್ಕೆ ಹಾಗೂ ಹೊಲಕ್ಕೆ ಹಾಯ್ದು ಹೋಗಲಿಕ್ಕೆ ಸಾಧ್ಯವಾಗುತ್ತಿಲ್ಲ ಎಲ್ಲ ಕಾಲುವೆಗಳ ಹೂಳೆತ್ತಲು ಆದೇಶಿಸಬೇಕು ಈ ಎಲ್ಲ ಬೇಡಿಕೆಗಳು 15 ದಿನದ ಒಳಗಾಗಿ ಈಡೇರಿಸದಿದ್ದರೆ ರಸ್ತೆ ತಡೆದು ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ರಮೇಶ್ ನಾಗಮ್ಮನವರ, ಶಿವನಗೌಡ ಗುರನಗೌಡ್ರ, ಈರಣ್ಣ ಕೆಸರಪ್ಪನವರ, ನಿಂಗಪ್ಪ ಕೀರೆಸುರ, ನಾರಾಯಣ ಕಾಲವಾಡ, ಪಕ್ಕೀರಗೌಡ ಯಂಕಣಗೌಡ, ನಿಂಗಪ್ಪ ನಾವಳ್ಳಿ, ಶಿವನಗೌಡ ಗೌಡರ ಇತರರು ಇದ್ದರು.