ಸರ್ಕಾರಿ ಆಸ್ಪತ್ರೆ, ಶಾಲೆಗೆ ಭೇಟಿ: ಪರಿಶೀಲನೆ
ಚನ್ನಮ್ಮನ ಕಿತ್ತೂರು,ಆ17: ತ್ವರಿತ ಗತಿಯಲ್ಲಿ ಸೋರುತ್ತಿರುವ ಮತ್ತು ಹಾಳಾದ ಕಟ್ಟಡಗಳನ್ನು ತೆರವುಗೊಳಿಸಿ, ತಕ್ಷಣವೇ ಏಸ್ಟಿಮೆಟ್ ಮಾಡಿಕೊಡಿ ಸರ್ಕಾರದ ಗಮನ ಸೆಳೆಯಲಾಗುವುದು, ಎಂದು ತಾಪಂ ಇಓ ಕಿರಣ ಗೋರ್ಪಡೆ ಜಿಪಂ ಅಭಿಯಂತರುಗಳಿಗೆ ಸೂಚಿಸಿದರು.
ತಾಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ಹಾಗೂ ಗ್ರಾಪಂದಲ್ಲಿಯ ಗ್ರಂಥಾಲಯ ಮತ್ತು ಸರಕಾರಿ ಮಾದರಿ ಕನ್ನಡ ಪ್ಪಾಥಮಿಕ ಶಾಲಾ ಆವರಣದಲ್ಲಿಯ ನೂತನ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳನ್ನು ಅಧಿಕಾರಿ ತಂಡದೊಂದಿಗೆ ಭೇಟಿನೀಡಿ ವಿಕ್ಷೀಸಿ ಮಾತನಾಡಿ, ಆದಷ್ಟು ಬೇಗನೇ ಆರೋಗ್ಯ ಸಿಬ್ಬಂದಿ ವಸತಿ ಗೃಹ ಮತ್ತು ಶಾಲಾ ಮಕ್ಕಳಿಗೂ ಅನುಕೂಲ ಮಾಡಿಕೊಡಲಾಗುವುದೆಂದು ಹೇಳಿದರು.
ನಂತರ ಶಾಲಾ ಹಾಜರಾತಿ ಹಾಗೂ ಇನ್ನುಳಿದ ದಾಖಲೆಗಳನ್ನು ಪರಿಶೀಲಿಸಿದರು.
ಈ ವೇಳೆ ಕ್ಷೇತ್ರ ಪ್ರಭಾರಿ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ, ಸಿಡಿಪಿಓ ಅರುಣಕುಮಾರ, ತಾಪಂ ಜಿಪಂ ಅಭಿಯಂತರುಗಳಾದ ಆರ್‍ಪಿ ಖಾಮಾಪೂರ, ಆರ್.ಆರ್ ಬಡಿಗೇರ, ಗ್ರಾಪಂ ಸದಸ್ಯ ಸಂಗಮೇಶ ಹಿರೇಮಠ, ಗ್ರಾಪಂ ಕಾರ್ಯದರ್ಶಿ ಬಸವರಾಜ ಅಂಬಡಗಟ್ಟಿ, ಗ್ರಂಥಪಾಲಕ ಜಗದೀಶ ಅಂಗಡಿ, ಸುರೇಶ ಕುರಗುಂದ, ಶಿವಾನಂದ ಹಿರೇಮಠ, ಬೈಲೂರ ಕ್ಲಸ್ಟರ್ರ ಸಿಆರ್‍ಪಿ ಶಿಕ್ಷಕ ಸಂಜು ಹುಬ್ಬಳ್ಳಿ. ಶಾಲಾ ಪ್ರಧಾನಗುರು ನಾಗಪ್ಪ ಮಲಮೇತ್ರಿ ದೈಹಿಕ ಶಿಕ್ಷಕ ಅಶೋಕ ಹುÀಬ್ಬಳ್ಳಿ, ಶಿಕ್ಷಕ ಗುರುಶಾಂತಯ್ಯಾ ಹಿರೆಮಠ, ಸಹಶಿಕ್ಷಕರು, ಗ್ರಾಪಂ ಸಿಬ್ಬಂದಿ ಸುನೀಲ್ ಮತ್ತು ಶಶಿಧರ, ಗ್ರಾಮಸ್ಥರಿದ್ದರು.